ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
									
										
								
																	
ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಇತ್ತೀಚೆಗಷ್ಟೇ 100 ದಿನ ಪೂರೈಸಿತ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
									
			
			 
 			
 
 			
			                     
							
							
			        							
								
																	ಆದರೆ ಸಿನಿಮಾ ಯಾವಾಗ ಪ್ರಸಾರವಾಗುತ್ತದೆ ಎಂದು ವಾಹಿನಿ ಬಹಿರಂಗಪಡಿಸಿಲ್ಲ. ಆದರೆ ಸದ್ಯದಲ್ಲೇ ಡಿ ಬಾಸ್ ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಸೂಪರ್ ಹಿಟ್ ಸಿನಿಮಾವನ್ನು ವೀಕ್ಷಿಬಹುದಾಗಿದೆ.