Select Your Language

Notifications

webdunia
webdunia
webdunia
webdunia

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!
ಬೆಂಗಳೂರು , ಶನಿವಾರ, 13 ಜುಲೈ 2019 (09:38 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ಸ್ಟಾರ್ ಜೆಕೆಯಾಗಿದ್ದ ನಟ ಜಯರಾಮ್ ಕಾರ್ತಿಕ್ ಈಗ ಮತ್ತೆ ಅದೇ ವಾಹಿನಿಯಲ್ಲಿ ಹೊಸ ಕಾರ್ಯಕ್ರಮಕ್ಕೆ ಎಂಟ್ರಿ ನೀಡುತ್ತಿದ್ದಾರೆ.


ಬಿಗ್ ಬಾಸ್ ಶೋ ಬಳಿಕ ಜೆಕೆ ಯಾವುದೇ ಕಿರುತೆರೆ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ‘ಕಾಮಿಡಿ ಕಂಪನಿ’ ಎನ್ನುವ ಹೊಸ ಶೋ ಮೂಲಕ ಬರುತ್ತಿದ್ದಾರೆ. ವಿಶೇಷವೆಂದರೆ ಜೆಕೆ ಜತೆ ಈ ಶೋನಲ್ಲಿ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಕೂಡಾ ಇರಲಿದ್ದಾರೆ.

ಇದರ ಪ್ರೋಮೋಗಳು ಬಿಡುಗಡೆಯಾಗಿದೆ. ಆದರೆ ಇದರಲ್ಲಿ ಜೆಕೆ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ. ತಮ್ಮ ಪಾತ್ರವೇನು ಎಂಬ ಬಗ್ಗೆ ವೀಕ್ಷಕರು ಕೇಳಿದ ಪ್ರಶ್ನೆಗೆ ಸರ್ಪ್ರೈಸ್ ಎಂದು ಜೆಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?