Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪೊಲೀಸರು ಅತಿಥಿಗಳು!

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪೊಲೀಸರು ಅತಿಥಿಗಳು!
ಬೆಂಗಳೂರು , ಗುರುವಾರ, 27 ಜೂನ್ 2019 (09:40 IST)
ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ ನಲ್ಲಿ ವೀಕ್ಷಕರ ಬಹುದಿನಗಳ ಒತ್ತಾಸೆ ಕೊನೆಗೂ ನೆರವೇರುತ್ತಿದೆ. ರಾಜ್ಯ ಕಂಡ ಇಬ್ಬರು ಪೊಲೀಸ್ ಅಧಿಕಾರಿಗಳ ಜೀವನದ ಅನಾವರಣ ಈ ವಾರ ನಡೆಯಲಿದೆ.


ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್ ಈ ವಾರ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಇವರ ಜೀವನದ ಸಾಧನೆಗಳನ್ನು ವೀಕ್ಷಿಸಬಹುದಾಗಿದೆ.

ಈ ಇಬ್ಬರು ಸಾಧಕರು ಈ ವಾರದ ಅತಿಥಿಗಳು ಎಂದು ತಿಳಿಯುತ್ತಲೇ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೀಟ್ ನಲ್ಲಿ ಕೂರಲು ತಕ್ಕ ವ್ಯಕ್ತಿಗಳು ಇವರು, ಈ ಎಪಿಸೋಡ್ ನೋಡಲು ಕಾಯುತ್ತಿದ್ದೇವೆ ಎಂದು ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ ಪಂಡಿತ್ ಗೆ ಎರಡನೇ ಮಗು! ಅಭಿಮಾನಿಗಳು ಫುಲ್ ಶಾಕ್!!