Select Your Language

Notifications

webdunia
webdunia
webdunia
webdunia

ಅಗ್ನಿಸಾಕ್ಷಿಯಿಂದ ಹೊರಬಂದ ವಿಜಯ್ ಸೂರ್ಯ ಕೊಟ್ಟಿದ್ದಾರೆ ಗುಡ್ ನ್ಯೂಸ್

ಅಗ್ನಿಸಾಕ್ಷಿಯಿಂದ ಹೊರಬಂದ ವಿಜಯ್ ಸೂರ್ಯ ಕೊಟ್ಟಿದ್ದಾರೆ ಗುಡ್ ನ್ಯೂಸ್
ಬೆಂಗಳೂರು , ಬುಧವಾರ, 19 ಜೂನ್ 2019 (10:36 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಈಗ ಏನು ಮಾಡ್ತಿದ್ದಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.


ತಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಎಂದು ವಿಜಯ್ ಈಗ ಬಹಿರಂಗಪಡಿಸಿದ್ದಾರೆ. ಸ್ಟಾರ್ ಪ್ಲಸ್ ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕಸೌಟಿ ಜಿಂದಗಿ ಕೆ ಎಂಬ ಹಿಂದಿ ಧಾರವಾಹಿಯ ಕನ್ನಡ ಅವತರಣಿಕೆಯಲ್ಲಿ ವಿಜಯ್ ನಾಯಕನಾಗಿ ಪಾತ್ರ ಮಾಡಲಿದ್ದಾರೆ.

ಹೊಸ ಧಾರವಾಹಿಗೆ ಸಹಿ ಹಾಕಿರುವ ಸುದ್ದಿಯನ್ನು ಸ್ವತಃ ವಿಜಯ್ ಕನ್ ಫರ್ಮ್ ಮಾಡಿದ್ದಾರೆ. ವಿಶೇಷವೆಂದರೆ ಈ ಧಾರವಾಹಿಯನ್ನೂ ಅಗ್ನಿಸಾಕ್ಷಿ ಧಾರವಾಹಿ ನಿರ್ದೇಶಿಸುತ್ತಿದ್ದ ಮೈಸೂರು ಮಂಜು ಅವರೇ ಇದನ್ನೂ ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ ಇದು ‘ಪ್ರೇಮಲೋಕ’ ಎಂಬ ಹೆಸರಿನಲ್ಲಿ ಮೂಡಿಬರಲಿದೆ. ಇದರ ಪ್ರೋಮೋ ಶೂಟ್ ಆಗಿದ್ದು, ಸದ್ಯದಲ್ಲೇ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಮಾಡಲು ಇವರೇ ಕಾರಣ!