Publish Date: Fri, 14 Jun 2019 (09:02 IST)
Updated Date: Fri, 14 Jun 2019 (09:04 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿತ್ತು. ಈ ಜನಪ್ರಿಯ ಕಾರ್ಯಕ್ರಮ ಇದೀಗ ಮತ್ತೆ ಮೂಡಿಬರಲಿದೆ.
ಈಗಾಗಲೇ ಜೀ ಕನ್ನಡ ವಾಹಿನಿ ಅಡಿಷನ್ ಶುರು ಮಾಡಿದ್ದು ಸೂಕ್ತ ಪ್ರತಿಭಾವಂತರ ಹುಡುಕಾಟದಲ್ಲಿದೆ. ಜೂನ್ 22 ಕ್ಕೆ ಹಾಸನ, ದಾವಣಗೆರೆ, ಜೂನ್ 23 ಕ್ಕೆ ಶಿವಮೊಗ್ಗ, ಮಂಗಳೂರು, ಜೂನ್ 29 ಕ್ಕೆ ಮೈಸೂರು, ಬಾಗಲಕೋಟೆ, ಜೂನ್ 30 ಕ್ಕೆ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಅಡಿಷನ್ ನಡೆಯಲಿದೆ.
ಈ ಬಾರಿಯೂ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಪ್ರೇಮ್ ಅವರೇ ತೀರ್ಪುಗಾರರಾಗುವುದು ಬಹುತೇಕ ಖಚಿತವಾಗಿದೆ. ಅಡಿಷನ್ ಮುಗಿದ ಬಳಿಕ ಕಾರ್ಯಕ್ರಮ ಆರಂಭವಾಗುವ ದಿನಾಂಕ ಘೋಷಣೆಯಾಗಲಿದೆ.