Publish Date: Fri, 14 Jun 2019 (08:44 IST)
Updated Date: Fri, 14 Jun 2019 (08:46 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ತವರೂರಿನ ಸಮಸ್ಯೆಯೊಂದಕ್ಕೆ ಪರಿಹಾರ ನೀಡಲು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.
ಟ್ವಿಟರ್ ಮೂಲಕ ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿರುವ ರಶ್ಮಿಕಾ ತಮ್ಮ ತವರು ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯೊಂದನ್ನು ನೀಡುವಂತೆ ಮನವಿ ಮಾಡಿದ್ದಾರೆ.
‘ಕೊಡಗಿನಲ್ಲಿ ಮೂಲಭೂತ ಅಗತ್ಯವಾದ ಒಂದು ಆಸ್ಪತ್ರೆಯ ಅಗತ್ಯವಿದೆ. ಉತ್ತಮ ಆಸ್ಪತ್ರೆ ಬೇಕೆಂದರೆ ನಾವು ಇಲ್ಲಿ ದೂರದೂರಿಗೆ ಹೋಗಬೇಕು. ನಮಗೆ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ. ದಯವಿಟ್ಟು ಸ್ಪಂದಿಸಿ’ ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.