Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಹೆಗಲಿಗೆ ಕೈ ಹಾಕಿ ಪೋಸ್ ಕೊಟ್ಟಿದ್ದಕ್ಕೆ ನಟಿಯ ಮೇಲೆ ಅಪ್ಪು ಫ್ಯಾನ್ಸ್ ಬೇಸರ!

ಪುನೀತ್ ರಾಜ್ ಕುಮಾರ್ ಹೆಗಲಿಗೆ ಕೈ ಹಾಕಿ ಪೋಸ್ ಕೊಟ್ಟಿದ್ದಕ್ಕೆ ನಟಿಯ ಮೇಲೆ ಅಪ್ಪು ಫ್ಯಾನ್ಸ್ ಬೇಸರ!
ಬೆಂಗಳೂರು , ಗುರುವಾರ, 13 ಜೂನ್ 2019 (09:22 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರೊಂದಿಗೆ ಸದಾ ನಗು ನಗುತ್ತಲೇ ಮಾತನಾಡಿಸುವ ವಿನಯವಂತ. ಆದರೆ ಪವರ್ ಸ್ಟಾರ್ ಜತೆ ನಟಿ ತ್ರಿವೇಣಿ ರಾವ್ ತೆಗೆಸಿಕೊಂಡ ಫೋಟೋ ಒಂದು ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.


ಟಗರು ಸಿನಿಮಾದಲ್ಲಿ ಕಾನ್ಸ್ ಟೇಬಲ್ ಸರೋಜ ಪಾತ್ರ ಮಾಡಿದ್ದ ನಟಿ ತ್ರಿವೇಣಿ ರಾವ್ ಪುನೀತ್ ಜತೆಗೆ ಹೆಗಲಿಗೆ ಕೈ ಹಾಕಿ ಆತ್ಮೀಯವಾಗಿ ಫೋಟೋಗೆ ಪೋಸ್ ಕೊಟ್ಟಿದ್ದನ್ನು ನೋಡಿ ಅಪ್ಪು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಯಾರೇ ಆಗಲಿ, ಹೀಗೆ ಅಪ್ಪು ಹೆಗಲಿಗೆ ಕೈ ಹಾಕಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದೇಕೆ ಎಂದು ಅಭಿಮಾನಿಗಳು ತಗಾದೆ ತೆಗೆದಿದ್ದಾರೆ. ಅಂದ ಹಾಗೆ ಕಾನ್ಸ್ ಟೇಬಲ್ ಸರೋಜ ಖ್ಯಾತಿಯ ತ್ರಿವೇಣಿ ಈಗ ಪುನೀತ್ ಯುವರತ್ನದಲ್ಲೂ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಥ್ಯಾಂಕ್ಸ್ ಹೇಳಿದ ಸಲ್ಮಾನ್ ಖಾನ್