ಟೀಂ ಇಂಡಿಯಾ ಕ್ರಿಕೆಟಿಗರಿಗೆ ಥ್ಯಾಂಕ್ಸ್ ಹೇಳಿದ ಸಲ್ಮಾನ್ ಖಾನ್

ಗುರುವಾರ, 13 ಜೂನ್ 2019 (09:15 IST)
ಮುಂಬೈ: ಲಂಡನ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಕೂಟದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಟೀಂ ಇಂಡಿಯಾ ಕ್ರಿಕೆಟಿಗರು ಭಾರತ್ ಸಿನಿಮಾ ವೀಕ್ಷಿಸಿದ್ದಾರೆ.


ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಧೋನಿ, ಕೆಎಲ್ ರಾಹುಲ್, ಶಿಖರ್ ಧವನ್, ಕೇದಾರ್ ಜಾಧವ್ ಮತ್ತಿತರ ಕ್ರಿಕೆಟಿಗರು ಬಿಡುವಿನ ವೇಳೆಯಲ್ಲಿ ಸಲ್ಮಾನ್ ಖಾನ್-ಕತ್ರಿನಾ ಕೈಫ್ ಅಭಿನಯದ ಭಾರತ್ ಸಿನಿಮಾ ನೋಡಿ ಬಂದಿದ್ದಾರೆ.

ಇದೀಗ ತಮ್ಮ ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಲ್ಲುಮಿಯಾ ಥ್ಯಾಂಕ್ಸ್ ಹೇಳಿದ್ದಾರೆ. ‘ಭಾರತ್ ಸಿನಿಮಾ ನೋಡಿದ ಭಾರತ ತಂಡಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ವಿಶ್ವಕಪ್ ಪಂದ್ಯಗಳಿಗೆ ಶುಭ ಹಾರೈಕೆಗಳು’ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರದ ಸಾಧಕನ ನೋಡಿ ಕೆಂಡಾಮಂಡಲರಾದ ವೀಕ್ಷಕರು