Publish Date: Wed, 12 Jun 2019 (08:51 IST)
Updated Date: Wed, 12 Jun 2019 (08:55 IST)
ಮುಂಬೈ: ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಸದ್ದಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಯುವರಾಜ್ ಸಿಂಗ್ ಗೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮಾಡಿದ ಟ್ವೀಟ್ ಒಂದು ಎಲ್ಲರ ಗಮನಸೆಳೆದಿತ್ತು.
ಯುವರಾಜ್ ಸಿಂಗ್ ಜತೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ರೋಹಿತ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಿನಗೆ ಇನ್ನೂ ಉತ್ತಮ ರೀತಿಯಲ್ಲಿ ವಿದಾಯ ಸಿಗಬೇಕಿತ್ತು ಬ್ರದರ್ ಎಂದು ರೋಹಿತ್ ತಮ್ಮ ಸಂದೇಶದಲ್ಲಿ ಬೇಸರದಿಂದಲೇ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯುವಿ ‘ನಿನಗೆ ಗೊತ್ತಿರಬಹುದು ಒಳಗೊಳಗೆ ನನಗೆ ಹೇಗೆ ಫೀಲ್ ಆಗುತ್ತಿದೆ ಎಂದು. ನಿನ್ನ ಮೇಲೆ ಪ್ರೀತಿಯಿದೆ, ನೀನು ದೊಡ್ಡ ಲೆಜೆಂಡ್ ಕ್ರಿಕೆಟಿಗನಾಗು’ ಎಂದು ಹಾರೈಸಿದ್ದಾರೆ. ಜತೆಗೆ ತಮಗೆ ಸೆಂಡ್ ಆಫ್ ಪಂದ್ಯ ಸಿಗದ ಬೇಸರ ಯುವರಾಜ್ ಗಿತ್ತು ಎನ್ನುವುದು ಈ ಟ್ವೀಟ್ ನಿಂದ ಗೊತ್ತಾಗಿದೆ.