ಹೊಸ ಲುಕ್ ನೊಂದಿಗೆ ಸರಿಗಮಪ ಕಾರ್ಯಕ್ರಮಕ್ಕೆ ಮರಳಿದ ವಿಜಯ್ ಪ್ರಕಾಶ್

ಗುರುವಾರ, 6 ಜೂನ್ 2019 (09:48 IST)
ಬೆಂಗಳೂರು: ಕಳೆದ ಕೆಲವು ಎಪಿಸೋಡ್ ಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಗಾಯಕ ವಿಜಯ್ ಪ್ರಕಾಶ್ ಇಲ್ಲದೇ ಸೊರಗಿ ಹೋಗಿತ್ತು.


ಸ್ಪರ್ಧಿಗಳ, ವೀಕ್ಷಕರ ಮೆಚ್ಚಿನ ತೀರ್ಪುಗಾರರಾಗಿರುವ ವಿಪಿ ಸರ್ ಇಲ್ಲದೇ ಯಾಕೋ ಕಾರ್ಯಕ್ರಮ ಡಲ್ ಆಗಿತ್ತು. ತಂದೆಯ ಸಾವು, ಅಮೆರಿಕಾ ಪ್ರವಾಸದ ನಡುವೆ ವಿಪಿ ಸರ್ ಬಿಡುವಿಲ್ಲದೇ ಇದ್ದ ಕಾರಣ ಸರಿಗಮಪ ಶೋಗೆ ಬಂದಿರಲಿಲ್ಲ.

ಈಗ ವಿಜಯ್ ಪ್ರಕಾಶ್ ಕಾರ್ಯಕ್ರಮಕ್ಕೆ ಮರಳಿದ್ದು, ‘ಮನೆಗೆ ಮರಳಿ ಬಂದಿದ್ದಾಯ್ತು ಸ್ನೇಹಿತರೇ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಕೃಷ್ಣನ್ ಜತೆಗಿರುವ ಸೆಲ್ಫೀ ಪ್ರಕಟಿಸಿದ್ದಾರೆ. ವಿಶೇಷವೆಂದರೆ ಕೂದಲು ಕತ್ತರಿಸಿಕೊಂಡಿರುವ ವಿಪಿ ಸರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇಷ್ಟು ದಿನ ಎಲ್ಲೋಗಿದ್ರಿ ಸರ್ ಎಂಬ ಪ್ರಶ್ನೆಗೆ ಅವರು ಮುಂದಿನ ಸರಿಗಮಪ ಎಪಿಸೋಡ್ ನಲ್ಲಿ ಉತ್ತರಿಸಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಬ್ಬಬ್ಬಾ...! 2000 ಪಕ್ಷಿಗಳನ್ನು ಸಾಕುತ್ತಿದ್ದಾರಂತೆ ನವರಸನಾಯಕ ಜಗ್ಗೇಶ್!