Select Your Language

Notifications

webdunia
webdunia
webdunia
webdunia

ಬರೀ ಸಿನಿಮಾದವರೇ ವೀಕೆಂಡ್ ಆಯ್ತು ಎಂಬ ದೂರಿಗೆ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?

ಬರೀ ಸಿನಿಮಾದವರೇ ವೀಕೆಂಡ್ ಆಯ್ತು ಎಂಬ ದೂರಿಗೆ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಭಾನುವಾರ, 2 ಜೂನ್ 2019 (09:23 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೇವಲ ಸಿನಿಮಾದವರೇ ಬರುತ್ತಿದ್ದಾರೆ ಎಂಬ ವೀಕ್ಷಕರ ಆರೋಪಗಳಿಗೆ ನಿರೂಪಕ ರಮೇಶ್ ಅರವಿಂದ್ ಉತ್ತರ ನೀಡಿದ್ದಾರೆ.


ಈ ವಾರ ಜೀ ಕನ್ನಡ ವಾಹಿನಿಯಲ್ಲಿ ಕನ್ನಡ ನಾಡೇ ಹೆಮ್ಮೆ ಪಡುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಎಪಿಸೋಡ್ ಪ್ರಸಾರವಾಗುತ್ತಿದೆ. ಇನ್ ಫೋಸಿಸ್ ಎಂಬ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿ ತಮ್ಮ ಕತೆ ಹೇಳುತ್ತಿರುವುದಕ್ಕೆ ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ನಡುವೆ ತಮ್ಮ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವ ರಮೇಶ್ ಅರವಿಂದ್, ನಮ್ಮ ಕಾರ್ಯಕ್ರಮ ಕೇವಲ ಸಿನಿಮಾದವರ ಕಾರ್ಯಕ್ರಮವಾಗುತ್ತಿದೆ ಎಂದು ಬಹಳಷ್ಟು ಜನ ಆರೋಪಿಸುತ್ತಾರೆ. ಆದರೆ ಈ ಕಾರ್ಯಕ್ರಮಕ್ಕೆ ಸಿನಿಮಾ ಹೊರತಾಗಿ ಬೇರೆ ರಂಗದ ಸಾಧಕರನ್ನು ಕರೆತರಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದೇವೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬರಬೇಕು ಎಂದು ಬಹಳ ಪ್ರಯತ್ನ ಪಟ್ಟಿದ್ದೇವೆ.

ಅಂತೂ ಈಗ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರನ್ನು ಕರೆತರಲು ಯಶಸ್ವಿಯಾಗಿದ್ದೇವೆ. ಅವರ ಒಂದೊಂದು ಮಾತೂ ನಮಗೆ ಸ್ಪೂರ್ತಿ ಎಂದು ರಮೇಶ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ರಿನಾ ಕೈಫ್ ಗೆ ಪ್ರಧಾನಿ ಮೋದಿ ಜತೆ ಡಿನ್ನರ್ ಮಾಡುವ ಆಸೆಯಂತೆ!