Select Your Language

Notifications

webdunia
webdunia
webdunia
webdunia

ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ಹೊರಬಂದ ಗುರುಮೂರ್ತಿ

ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ಹೊರಬಂದ ಗುರುಮೂರ್ತಿ
ಬೆಂಗಳೂರು , ಸೋಮವಾರ, 3 ಜೂನ್ 2019 (09:54 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹೆಂಗಳೆಯರ ಮೆಚ್ಚಿನ ಧಾರವಾಹಿ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ನಾಯಕ ನಟ ಭವಾನಿ ಸಿಂಗ್ ಹೊರಬಂದಿದ್ದಾರೆ.


ನಾಯಕಿ ಸುಬ್ಬಲಕ್ಷ್ಮಿ ಗಂಡನ ಪಾತ್ರ ಮಾಡುತ್ತಿದ್ದ ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ ಧಾರವಾಹಿಯಿಂದ ಹೊರ ನಡೆದಿದ್ದಾರೆ. ಮೂಲಗಳ ಪ್ರಕಾರ ಕೆಲ ವರ್ಷಗಳಿಂದ ಬಿಡುವಿಲ್ಲದೇ ಧಾರವಾಹಿಗಳಲ್ಲಿ ಮಾಡುತ್ತಿದ್ದ ಭವಾನಿ ಸಿಂಗ್ ಬ್ರೇಕ್ ಬೇಕು ಎಂಬ ಕಾರಣಕ್ಕೆ ಧಾರವಾಹಿಯಿಂದ ಹೊರನಡೆಯಲು ನಿರ್ಧರಿಸಿದ್ದಾರಂತೆ.

ಸುಬ್ಬಲಕ್ಷ್ಮಿ ಸಂಸಾರದಲ್ಲಿ ಸುಬ್ಬಕ್ಕನ ಪಾತ್ರದಷ್ಟೇ ಗುರುಮೂರ್ತಿ ಪಾತ್ರಕ್ಕೂ ಅಭಿಮಾನಿಗಳಿದ್ದರು. ಪತ್ನಿಯಿದ್ದರೂ ಬೇರೆ ಹುಡುಗಿ ಜತೆ ಸಂಬಂಧವಿಟ್ಟುಕೊಂಡ ಪಾತ್ರವಾದರೂ ಗುರುಮೂರ್ತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಆದರೆ ಈಗ ಭವಾನಿ ಸಿಂಗ್ ಸ್ಥಾನಕ್ಕೆ ಬೇರೊಬ್ಬ ನಟ ಗುರುಮೂರ್ತಿಯಾಗಿ ಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಹೊಸ ಅವತಾರ ನೋಡಲು ಇಂದು ಕಾಯ್ತಾ ಇರಿ!