Publish Date: Mon, 03 Jun 2019 (09:47 IST)
Updated Date: Mon, 03 Jun 2019 (09:49 IST)
ಬೆಂಗಳೂರು: ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ ಟೀಸರ್ ಮೂಲಕ ಪೈಲ್ವಾನ್ ಲುಕ್ ರಿಲೀಸ್ ಆಗಿದೆ. ಇಂದು ಮತ್ತೊಂದು ಅವತಾರ ನಿಮ್ಮ ಮುಂದೆ ಬರಲಿದೆ.
ಕಿಚ್ಚನ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆಯಾಗಲಿದ್ದು, ಕಿಚ್ಚ ಸುದೀಪ್ ತಮ್ಮ ತಂಡಕ್ಕೆ ಭಾವನಾತ್ಮಕವಾಗಿ ಥ್ಯಾಂಕ್ಸ್ ಹೇಳಿದ್ದಾರೆ.
ನನ್ನನ್ನು ಈ ಸಿನಿಮಾಗೆ ತೊಡಗಿಸಿಕೊಳ್ಳಲು ಪ್ರತೀ ಹಂತದಲ್ಲೂ ಸಹಾಯ ಮಾಡಿದ ತಂಡಕ್ಕೆ, ನನ್ನ ಪ್ರೋತ್ಸಾಹಿಸಿ ಬರೆದ ಎಲ್ಲಾ ಟ್ವೀಟ್ ಗಳಿಗೂ ಧನ್ಯವಾದ ಎಂದು ಕಿಚ್ಚ ಭಾವುಕರಾಗಿ ಬರೆದುಕೊಂಡಿದ್ದಾರೆ. ಇಂದು ಪೋಸ್ಟರ್ ಬಿಡುಗಡೆಯಾಗಲಿದೆ.