ವೀಕೆಂಡ್ ವಿತ್ ರಮೇಶ್ ನಲ್ಲಿ ಸುಮಲತಾ ಅಂಬರೀಶ್! ವೀಕ್ಷಕರಿಂದ ಮತ್ತೆ ತಗಾದೆ

ಗುರುವಾರ, 6 ಜೂನ್ 2019 (09:28 IST)
ಬೆಂಗಳೂರು: ಕಳೆದ ವಾರ ಇನ್ ಫೋಸಿಸ್ ಸಂ‍ಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿಯವರ ಸಾಧನೆಗಳನ್ನು ನೋಡಿದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವೀಕ್ಷಕರಿಗೆ ಈ ವಾರದ ಅತಿಥಿಗಳನ್ನು ನೋಡಿ ಸ್ವಲ್ಪ ಖುಷಿ, ಸ್ವಲ್ಪ ಬೇಸರವಾಗಿದೆ.


ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಮತ್ತು ಭಾನುವಾರ ನಿರ್ದೇಶಕ ನಾಗಾಬರಣ ಅವರು ಸಾಧಕರಾಗಿ ಆಗಮಿಸುತ್ತಿದ್ದಾರೆ.

ಇವರಲ್ಲಿ ನಾಗಾಬರಣ ರಂಗಭೂಮಿಯಲ್ಲೂ ಕೆಲಸ ಮಾಡಿದವರು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು. ಹೀಗಾಗಿ ಅವರನ್ನು ಸಾಧಕರ ಸೀಟ್ ಗೆ ಅವರನ್ನು ಕರೆತಂದಿದ್ದಕ್ಕೆ ವೀಕ್ಷಕರಿಗೆ ತಕರಾರು ಇಲ್ಲ.

ಆದರೆ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾರನ್ನು ಕರೆತಂದಿದ್ದಕ್ಕೆ ವೀಕ್ಷಕರು ತಗಾದೆ ತೆಗೆದಿದ್ದಾರೆ. ಕೇವಲ ಚಿತ್ರ ನಟಿ, ಅಂಬರೀಶ್ ಪತ್ನಿ ಎನ್ನುವುದನ್ನು ಹೊರತುಪಡಿಸಿದರೆ ಸುಮಲತಾ ಸಾಧನೆ ಏನು ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಕೇವಲ ಚಿತ್ರನಟರನ್ನೇ ಕರೆತರುವುದಕ್ಕೂ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿನ್ ಹೊಟ್ಟೆ ತಣ್ಣಗಿರ್ಲಪ್ಪಾ ಎಂದು ರಾಕಿಂಗ್ ಸ್ಟಾರ್ ಯಶ್ ಗೆ ಆಶೀರ್ವದಿಸಿದ ಜನ