Publish Date: Thu, 30 May 2019 (09:35 IST)
Updated Date: Thu, 30 May 2019 (09:37 IST)
ಮಂಡ್ಯ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದ ಮಂಡ್ಯ ಕ್ಷೇತ್ರದ ಮತದಾರರಿಗೆ ಅಂಬರೀಶ್ ಜನ್ಮದಿನದಂದು ಸಮಾವೇಶ ಆಯೋಜಿಸಿ ವಿಜಯೋತ್ಸವ ಆಚರಿಸಿದ ಸುಮಲತಾ ಅಂಬರೀಶ್ ಚುನಾವಣೆ ಸಂದರ್ಭದಲ್ಲಿ ತಮಗೆ ನೋವು ಕೊಟ್ಟ ಘಟನೆಯೇನು ಎಂದು ಬಹಿರಂಗಪಡಿಸಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಸುಮಲತಾ ವಿರುದ್ಧ ಜೆಡಿಎಸ್ ನಾಯಕರು ವೈಯಕ್ತಿಕ ನಿಂದನೆ ಮಾಡಿದ್ದರು. ಆದರೆ ಇದೆಲ್ಲಕ್ಕಿಂತ ತನಗೆ ಹೆಚ್ಚು ನೋವು ಕೊಟ್ಟಿದ್ದು ಯಾವುದು ಎಂದು ಸುಮಲತಾ ಬಹಿರಂಗಪಡಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನನ್ನ ಪರವಾಗಿ ನಿಂತಿದ್ದಕ್ಕೆ ಯಶ್ ಮತ್ತು ದರ್ಶನ್ ವಿರುದ್ಧ ಇಷ್ಟ ಬಂದ ಹಾಗೆ ವಾಗ್ದಾಳಿ ನಡೆಸಿದ್ದು ತಮಗೆ ತೀವ್ರ ನೋವು ಉಂಟುಮಾಡಿತು ಎಂದು ಸುಮಲತಾ ಹೇಳಿಕೊಂಡಿದ್ದಾರೆ.