Select Your Language

Notifications

webdunia
webdunia
webdunia
webdunia

ತವರಿಗೆ ವಾಪಸಾದ ಡಿಕೆಶಿ ಕಣ್ಣು, ಕಿವಿ ಮುಚ್ಕೊಂಡಿರ್ತಾರಂತೆ!

ತವರಿಗೆ ವಾಪಸಾದ ಡಿಕೆಶಿ ಕಣ್ಣು, ಕಿವಿ ಮುಚ್ಕೊಂಡಿರ್ತಾರಂತೆ!
ಬೆಂಗಳೂರು , ಮಂಗಳವಾರ, 28 ಮೇ 2019 (10:14 IST)
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಸಚಿವ ಡಿಕೆ ಶಿವಕುಮಾರ್ ತವರಿಗೆ ಮರಳಿದ್ದಾರೆ.


ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಡಿಕೆಶಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪತ್ರಕರ್ತರು ಅವರಿಗೆ ಮುತ್ತಿಗೆ ಹಾಕಿ ರಾಜ್ಯದ ಕಾಂಗ್ರೆಸ್ ನಾಯಕರ ಅತೃಪ್ತಿ, ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಮಾಡಿದರು.

ಇದಕ್ಕೆ ನಗುತ್ತಲೇ ಉತ್ತರಿಸಿದ ಡಿಕೆಶಿ, ಎಲ್ಲಾ ವಿಚಾರಗಳೂ ವ್ಯಾಟ್ಸಪ್, ಫೋನ್ ಮೂಲಕ ನನಗೆ ಗೊತ್ತಾಗುತ್ತಿದೆ. ಆದರೆ ನಾನು ಗಾಂಧಿ ಅನುಯಾಯಿ. ಸದ್ಯಕ್ಕೆ ಕಿವಿ ಮುಚ್ಚಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇರುತ್ತೇನೆ ಎಂದು ನಗುತ್ತಲೇ ನುಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಪಕ್ಕಾ