Publish Date: Mon, 27 May 2019 (14:36 IST)
Updated Date: Mon, 27 May 2019 (14:40 IST)
ಮೈಸೂರು : ಇಂದು ನಡೆಯುಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಮಹತ್ಯದ ವಿಚಾರಗಳ ಕುರಿತು ಸಚಿವ ಸಂಪುಟ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೇಲವ ದಿವಂಗತ ಶಿವಳ್ಳಿಯವರ ಅಕಾಲಿಕ ಸಾವಿನಿಂದ ತೆರವಾದ ಸ್ಥಾನಕ್ಕೆ ಭರ್ತಿಯ ಬಗ್ಗೆ ಚರ್ಚೆ ನಡೆಸಲಿದ್ದೇವೆ ಹೊರತು ಸಚಿವ ಸಂಪುಟ ಪುನರ್ ರಚನೆಯೂ ಇಲ್ಲ. ವಿಸ್ತರಣೆಯೂ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಒಂದು ಸ್ಥಾನ, ಜೆಡಿಎಸ್ ನಿಂದ ಎರಡು ಸ್ಥಾನಗಳು ಭರ್ತಿಯಾಗಬೇಕಿದೆ. ಹೀಗಾಗಿ ಈ ಸ್ಥಾನಗಳ ಭರ್ತಿಗಾಗಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಇದರೊಟ್ಟಿಗೆ ವಿವಿಧ ಕಾರ್ಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.