Publish Date: Fri, 24 May 2019 (17:38 IST)
Updated Date: Fri, 24 May 2019 (17:40 IST)
ಲೋಕಸಭೆ ಚುನಾವಣೆ ಫಲಿತಾಂಶ ನಂತರ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಆದರೆ ತಾವು ಮಾತ್ರ ರಾಜೀನಾಮೆ ನೀಡೊಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಈ ಹೇಳಿಕೆ ನೀಡಿದ್ದಾರೆ. ಹೆಚ್.ಡಿ.ದೇವೇಗೌಡರ ಭೇಟಿ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಎರಡೂ ಪಕ್ಷಗಳ ಶಾಸಕರ ಸಭೆ ಆಗಬೇಕು ಎಂದು ಚರ್ಚೆ ಮಾಡಲಾಗಿದೆ. ಚುನಾವಣಾ ಫಲಿತಾಂಶದ ಮೇಲೆ ಮುಂದೆ ಹೇಗೆ? ದಾರಿ ಏಕೆ ಹೀಗಾಯಿತು? ಎನ್ನುವುದರ ಕುರಿತು ಜೆಡಿಎಲ್ಪಿ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದ್ರು.
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ವಿಚಾರವನ್ನು ಸದ್ಯಕ್ಕೆ ಮುಂದೆ ಹಾಕುತ್ತಿದ್ದೇನೆ. ನಾನೀಗ ರಾಜೀನಾಮೆ ಕೊಟ್ಟರೆ ದೇವೇಗೌಡರಿಗೆ ಇನ್ನಷ್ಟು ನೋವಾಗುತ್ತದೆ.
ಮೈತ್ರಿ ಸರ್ಕಾರ ಇರುತ್ತದೆ. ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದು ಸರಿಯಿಲ್ಲ ಎಂದು ಹೇಳುತ್ತಿದ್ದಾರೆ ಎಂದ್ರು.