Select Your Language

Notifications

webdunia
webdunia
webdunia
webdunia

ಏನ್ರೀ ನಿಮ್ದು ಫ್ಯಾಮಿಲಿ ಡ್ರಾಮಾ? ಪ್ರಜ್ವಲ್ ರೇವಣ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಏನ್ರೀ ನಿಮ್ದು ಫ್ಯಾಮಿಲಿ ಡ್ರಾಮಾ? ಪ್ರಜ್ವಲ್ ರೇವಣ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಬೆಂಗಳೂರು , ಶನಿವಾರ, 25 ಮೇ 2019 (07:09 IST)
ಬೆಂಗಳೂರು: ತಾತ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ ಸೋತಿದ್ದಕ್ಕೆ ತಾವು ಗೆದ್ದ ಹಾಸನ ಕ್ಷೇತ್ರಕ್ಕೆ ರಾಜೀನಾಮೆ ಕೊಡಲು ಮುಂದಾದ ಪ್ರಜ್ವಲ್ ರೇವಣ್ಣಗೆ ಜನರ ಆಕ್ರೋಶದ ಬಿಸಿ ತಾಗಿದೆ.


ತನಗಾಗಿ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದ ಗೌಡರು ಸೋತಿದ್ದಕ್ಕೆ ಪ್ರಜ್ವಲ್ ನಾನು ತಾತನಿಗಾಗಿ ನನ್ನ ಸಂಸದ  ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದರು. ಮತ್ತೆ ಹಾಸನದಿಂದ ದೇವೇಗೌಡರು ಸ್ಪರ್ಧಿಸಿ ಅವರನ್ನು ಸಂಸದರನ್ನಾಗಿ ಮಾಡಲು ಯೋಜನೆ ಹಾಕಿದ್ದರು.

 ಆದರೆ ಪ್ರಜ್ವಲ್ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನೊಮ್ಮೆ ಎಲೆಕ್ಷನ್ ಖರ್ಚು ಯಾರು ನಿಮ್ಮ ಕುಟುಂಬ ಭರಿಸತ್ತಾ? ನಿಮ್ಮ ಫ್ಯಾಮಿಲಿ ಡ್ರಾಮಾಗೆ ನಮ್ಮ ತೆರಿಗೆ ಹಣ ಯಾಕೆ ಪೋಲು ಮಾಡುತ್ತೀರಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಇದು ಪ್ರಜ್ವಲ್ ರೇವಣ್ಣ ನಾಮಪತ್ರದ ಗೊಂದಲದ ಕೇಸು ನ್ಯಾಯಾಲಯದಲ್ಲಿದ್ದು, ಇದರ ವಿಚಾರಣೆ ನಡೆದು ಸಂಸತ್ ಸ್ಥಾನ ಅನರ್ಹಗೊಂಡರೆ ಜೆಡಿಎಸ್ ಗೆ ಇದ್ದ ಒಂದು ಸೀಟೂ ನಷ್ಟವಾಗುತ್ತದೆ ಎಂದು ಈ ಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರತ್ ಅಗ್ನಿ ದುರಂತ: 18 ವಿದ್ಯಾರ್ಥಿಗಳ ಮಾರಣಹೋಮ