Publish Date: Fri, 24 May 2019 (07:43 IST)
Updated Date: Fri, 24 May 2019 (07:45 IST)
ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಮತ್ತೆ ಪ್ರಧಾನಿ ಗದ್ದುಗೆಗೇರುತ್ತಿರುವ ನರೇಂದ್ರ ಮೋದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ನಡುವೆ ಎಡಪಂಥೀಯ ವಿಚಾರಧಾರೆಗಳನ್ನು ಸದಾ ಟೀಕಿಸುವ ಸೋನು ನಿಗಂ ಪ್ರಧಾನಿ ಮೋದಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೋದಿ ಗೆಲುವಿಗೆ ಖುಷಿ ವ್ಯಕ್ತಪಡಿಸಿರುವ ಸೋನು ನಿಗಂ ‘ಇಡೀ ದೇಶವೇ ನಿಮ್ಮ ಮೇಲೆ ಪ್ರೀತಿ ತೋರಿಸಿದೆ ಮೋದಿಜೀ. ವೆಲ್ ಕಮ್ ಬ್ಯಾಕ್. ದೇಶಕ್ಕೆ ಅಭಿನಂದನೆಗಳು ಮತ್ತು ಮೋದಿ ಆಡಳಿತದಲ್ಲಿ ನಮ್ಮ ದೇಶ ಶಾಂತಿಯುತವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ