Select Your Language

Notifications

webdunia
webdunia
webdunia
webdunia

ಈ ವಾರ ವೀಕೆಂಡ್ ವಿತ್ ರಮೇಶ್ ನ ಅತಿಥಿ ಯಾರು ಗೊತ್ತೇ?

ಈ ವಾರ ವೀಕೆಂಡ್ ವಿತ್ ರಮೇಶ್ ನ ಅತಿಥಿ ಯಾರು ಗೊತ್ತೇ?
ಬೆಂಗಳೂರು , ಗುರುವಾರ, 4 ಜುಲೈ 2019 (09:18 IST)
ಬೆಂಗಳೂರು: ಕಳೆದ ವಾರ ರಾಜ್ಯ ಕಂಡ ಇಬ್ಬರು ಮಹಾನ್ ಪೊಲೀಸ್ ಅಧಿಕಾರಿಗಳ ಜೀವನಗಾಥೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಲಾಗಿತ್ತು. ಈ ಎಪಿಸೋಡ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.


ಈ ವಾರ ಮತ್ತೆ ವೀಕೆಂಡ್ ವಿತ್ ರಮೇಶ್ ನಲ್ಲಿ ಸ್ಯಾಂಡಲ್ ವುಡ್ ಮತ್ತು ಸಾಹಿತ್ಯ ಲೋಕದ ಸಾಧಕರ ಸಮಾಗಮನವಾಗಿದೆ. ಈ ವಾರ ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಸಾಹಿತಿ ಚಂದ್ರಶೇಖರ ಕಂಬಾರರು ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ.

ಬಂಧನ, ಮುತ್ತಿನ ಹಾರ, ಹಿಮಪಾತದಂತಹ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟ, ಮಹಾನ್ ನಟರಿಗೆ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಜೀವನಗಾಥೆಯನ್ನು ಈ ಶನಿವಾರ ಕೇಳಬಹುದು. ಭಾನುವಾರ ಕಂಬಾರರ ಕತೆ ಕೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮಲ್ಲಿಕಾ ಶೆರಾವತ್ ಹಾಟ್ ಸೊಂಟದ ಮೇಲೆ ಹೀಗೆ ಮಾಡಲು ಬಯಸಿದ್ದನಂತೆ ಆ ನಿರ್ಮಾಪಕ!