Publish Date: Thu, 11 Jul 2019 (09:05 IST)
Updated Date: Thu, 11 Jul 2019 (09:07 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಅಡಿಯೋ ರಿಲೀಸ್ ದಿನ ಟ್ರೈಲರ್ ಒಂದು ಬಿಡುಗಡೆಯಾಗಿತ್ತು. ಆದರೆ ಆ ಟ್ರೈಲರ್ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿತ್ತು.
ಟ್ರೈಲರ್ ನಲ್ಲಿ ಹೊಸದೇನೂ ಇಲ್ಲ. ಇದೊಂದು ಡಬ್ಬಾ ಟ್ರೈಲರ್ ಎಂದು ಅಭಿಮಾನಿಗಳು ತಿರಸ್ಕರಿಸಿದ್ದರು. ಇದರಿಂದಾಗಿ ಟ್ರೈಲರ್ ಹೆಚ್ಚೇನೂ ಸದ್ದು ಮಾಡಲಿಲ್ಲ. ಹೀಗಾಗಿ ಚಿತ್ರತಂಡ ಈಗ ಹೊಸ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧವಾಗಿದೆ.
ಶುಕ್ರವಾರ ಬದಲಾವಣೆಗಳೊಂದಿಗೆ ಹೊಸ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಟ್ರೈಲರ್ ನಲ್ಲಿ ಅಭಿಮಾನಿಗಳು ಹೊರಹಾಕಿರುವ ಅಂಶಗಳನ್ನು ಸೇರ್ಪಡೆಗೊಳಿಸಲು ಚಿತ್ರತಂಡ ಯೋಜನೆ ರೂಪಿಸಿದೆ.