Publish Date: Sat, 13 Jul 2019 (09:44 IST)
Updated Date: Sat, 13 Jul 2019 (09:46 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ಕೆಲವು ಅತಿಥಿಗಳು ಸಾಧಕರ ಸೀಟ್ ನಲ್ಲಿ ಕೂರಲಿಲ್ಲ ಎಂಬ ಬೇಸರದಲ್ಲಿದ್ದಾರೆ.
ಆದರೆ ಫೈನಲ್ ಎಪಿಸೋಡ್ ನಲ್ಲಿ ವೀಕ್ಷಕರು ಇದುವರೆಗೆ ಆಗ್ರಹಿಸಿದ್ದ ಸಾಧಕರೊಬ್ಬರ ಆಗಮನವಾಗಲಿದೆ. ಫೈನಲ್ ಎಪಿಸೋಡ್ ಈ ಬಾರಿ ಒಬ್ಬರೇ ಸಾಧಕರ ಬಗ್ಗೆ ಇರುವುದಿಲ್ಲ. ಬೇರೆ ಮಾದರಿಯಲ್ಲಿ ಫೈನಲ್ ಎಪಿಸೋಡ್ ಮಾಡಲಾಗುತ್ತದೆ ಎಂದು ಈಗಾಗಲೇ ನಿರೂಪಕ ರಮೇಶ್ ಅರವಿಂದ್ ಸುಳಿವು ಕೊಟ್ಟಿದ್ದಾರೆ.
ಈ ನಡುವೆ ಫೈನಲ್ ಎಪಿಸೋಡ್ ನಲ್ಲಿ ಎಷ್ಟೋ ಯುವ ಜನರಿಗೆ ಸ್ಪೂರ್ತಿಯಾಗಿರುವ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದು, ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಘೋಷಿಸಿದ್ದ ಅಣ್ಣಾ ಮಲೈ ಅತಿಥಿಯಾಗುತ್ತಿದ್ದಾರೆ. ಅವರ ಜತೆಗೆ ಖ್ಯಾತ ಚಿತ್ರ ಕಲಾವಿದ ವಿಲಾಸ್ ನಾಯಕ್ ಆಗಮಿಸುತ್ತಿದ್ದಾರೆ. ಇವರಲ್ಲದೇ ಇನ್ನೂ ಅನೇಕ ಅಚ್ಚರಿಗಳು ಈ ಫೈನಲ್ ಎಪಿಸೋಡ್ ನಲ್ಲಿರಲಿವೆ.