Publish Date: Sun, 14 Jul 2019 (09:26 IST)
Updated Date: Sun, 14 Jul 2019 (09:28 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಜತೆಗಿನ ಎಂಗೇಜ್ ಮೆಂಟ್ ಮುರಿದುಕೊಂಡು ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಆಗಾಗ ಕನ್ನಡಿಗ ಪ್ರೇಕ್ಷಕರಿಂದ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ.
ಇದೀಗ ಕೊಡಗಿನ ಬೆಡಗಿ ಡಿಯರ್ ಕಾಮ್ರೇಡ್ ಸಿನಿಮಾದ ಕನ್ನಡ ಅವತರಣಿಕೆಯ ಟ್ರೈಲರ್ ನೋಡಿ ಎಂದು ಆಂಗ್ಲ ಭಾಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವುದಕ್ಕೆ ಟ್ರೋಲ್ ಗೆ ತುತ್ತಾಗಿದ್ದಾರೆ.
ಮೈ ಕನ್ನಡಿಗಾಸ್ ಎಂದು ರಶ್ಮಿಕಾ ಬರೆದಿರುವುದಕ್ಕೆ ಟ್ವಿಟರಿಗರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಇದನ್ನು ಕನ್ನಡದಲ್ಲೇ ಹೇಳಬಹುದಿತ್ತಲ್ಲಾ ಎಂದು ಹಲವರು ಕಾಲೆಳೆದಿದ್ದಾರೆ. ಇನ್ನು ಕೆಲವರು ಮೊದಲು ಸರಿಯಾಗಿ ಕನ್ನಡ ಮಾತನಾಡಲು ಕಲಿಯಿರಿ ಎಂದು ಟ್ರೋಲ್ ಮಾಡಿದ್ದಾರೆ.