ಹೈದರಾಬಾದ್: ಕೆಜಿಎಫ್ ಸಿನಿಮಾದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪರಭಾಷಾ ಸ್ಟಾರ್ ಗಳಿಗೂ ಪರಿಚಿತರಾಗಿದ್ದಾರೆ. ಈಗ ಕನ್ನಡದ ಈ ಪ್ರತಿಭಾವಂತ ನಿರ್ದೇಶಕ ತೆಲುಗು ಸೂಪರ್ ಸ್ಟಾರ್ ಜ್ಯೂನಿಯರ್ ಎನ್ ಟಿಆರ್ ಜತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಸದ್ಯಕ್ಕೆ ಪ್ರಶಾಂತ್ ಕೆಜಿಎಫ್ ಚಾಪ್ಟರ್ 2 ನಲ್ಲಿ ಬ್ಯುಸಿಯಾಗಿದ್ದರೆ, ಜ್ಯೂನಿಯರ್ ಎನ್ ಟಿಆರ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ.
ಈ ಸಿನಿಮಾ ಬಳಿಕ ಇವರಿಬ್ಬರೂ ಒಟ್ಟಾಗಿ ಒಂದು ಸಿನಿಮಾ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಶಾಂತ್ ಈಗಾಗಲೇ ಜ್ಯೂನಿಯರ್ ಎನ್ ಟಿಆರ್ ಗೆ ಕತೆಯೊಂದನ್ನು ಹೇಳಿದ್ದು, ಅದು ಎನ್ ಟಿಆರ್ ಗೆ ಇಷ್ಟವಾಗಿದೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೇ ಇವರ ಸಿನಿಮಾ ಸೆಟ್ಟೇರಿದರೂ ಅಚ್ಚರಿಯಿಲ್ಲ.