ಪತ್ನಿ ನಮ್ರತಾ ತುಂಬಾ ಸ್ಟ್ರಿಕ್ಟ್ ಎಂದ ಮಹೇಶ್ ಬಾಬು

ಗುರುವಾರ, 20 ಜೂನ್ 2019 (08:41 IST)
ಹೈದರಾಬಾದ್: ತೆಲುಗು ನಟ, ಪ್ರಿನ್ಸ್ ಮಹೇಶ್ ಬಾಬು ಸಂದರ್ಶನವೊಂದರಲ್ಲಿ ತಮ್ಮ ಪತ್ನಿ ನಮ್ರತಾ ಮತ್ತು ಕುಟುಂಬದ ಜೀವನದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.


ಈ ವೇಳೆ ತಮ್ಮಿಬ್ಬರಲ್ಲಿ ಮಕ್ಕಳನ್ನು ಹೆಚ್ಚು ಗದರುವುದು ಯಾರು? ಯಾರು ಹೆಚ್ಚು ಸ್ಟ್ರಿಕ್ಟ್? ಯಾರು ಮುದ್ದು ಮಾಡುವುದು ಹೆಚ್ಚು ಎಂಬುದನ್ನು ಮಹೇಶ್ ಬಾಬು ಬಹಿರಂಗಪಡಿಸಿದ್ದಾರೆ.

‘ನಮ್ಮಿಬ್ಬರಲ್ಲಿ ನಮ್ರತಾ ಹೆಚ್ಚು ಸ್ಟ್ರಿಕ್ಟ್. ಅದು ಒಳ್ಳೆಯದು ಕೂಡಾ. ಮಕ್ಕಳನ್ನೂ ಶಿಸ್ತಿನಿಂದ ಬೆಳೆಸಿದ್ದಾಳೆ. ಆದರೆ ನಾನು ಮುದ್ದು ಮಾಡುವುದು ಜಾಸ್ತಿ. ಹೀಗಾಗಿ ನಾನು ಮುದ್ದು ಮಾಡುವಾಗ ಅವಳು ಮಕ್ಕಳಿಬ್ಬರೂ ಹದ್ದುಮೀರಿ ವರ್ತಿಸದಂತೆ ಎಚ್ಚರಿಕೆ ವಹಿಸುತ್ತಾಳೆ. ಹೀಗಾಗಿ ಮಕ್ಕಳೂ ವಿಧೇಯತೆ ಬೆಳೆಸಿಕೊಂಡಿದ್ದಾರೆ’ ಎಂದು ಮಹೇಶ್ ಬಾಬು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ಜತೆ ನಟಿ ಊರ್ವಶಿ ರೌಟೇಲಾ ನೀಡಿದ ಪೋಸ್ ನೋಡಿದರೆ ಅನುಷ್ಕಾಗೆ ಸಿಟ್ಟು ಬರೋದು ಖಂಡಿತಾ!