Publish Date: Tue, 18 Jun 2019 (08:52 IST)
Updated Date: Tue, 18 Jun 2019 (08:55 IST)
ಚೆನ್ನೈ: ಹಲವು ಸಿನಿಮಾ ತಾರೆಯರ ಬಗ್ಗೆ ಲೈಂಗಿಕ ಕಿರುಕುಳ, ಖಾಸಗಿ ಜೀವನದ ವಿಚಾರಗಳನ್ನು ಬಹಿರಂಗಗೊಳಿಸಿ ಸುದ್ದಿಯಾಗಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗ ತಮಿಳು ಸ್ಟಾರ್ ನಟ ವಿಶಾಲ್ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.
ದ.ಭಾರತ ಸಿನಿ ಕಲಾವಿದರ ಸಂಘದ ಮಹಾಕಾರ್ಯದರ್ಶಿ ಹುದ್ದೆಗೆ ಚುನಾವಣೆಗೆ ನಿಂತಿರುವ ವಿಶಾಲ್ ಹೆಣ್ಣು ಬಾಕ ಎಂದು ಶ್ರೀರೆಡ್ಡಿ ಆರೋಪ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ವಿಶಾಲ್ ತಮ್ಮ ಜತೆ ನಟಿಸುವ ನಟಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಹುಡುಗಿಯರ ಜತೆ ಲೈಂಗಿಕ ಬಯಕೆ ತೀರಿಸಿಕೊಳ್ಳುತ್ತಾರೆ. ಅವರಿಗೆ ಹುಡುಗಿಯರನ್ನು ಪೂರೈಸುವವರು ಯಾರು ಎಂದೂ ನನಗೆ ಗೊತ್ತು. ವಿಶಾಲ್ ಒಬ್ಬ ಮಹಾನ್ ವಂಚಕ. ನನ್ನ ತಾಯಿ, ವೃತ್ತಿ ಮೇಲೆ ಆಣೆ ಇಟ್ಟು ಈ ಮಾತು ಹೇಳುತ್ತಿದ್ದಾನೆ. ಒಂದು ವೇಳೆ ಅವರು ನನ್ನನ್ನು ಕೊಂದರೂ ನಾನು ಇದೇ ಮಾತನ್ನು ಹೇಳುವೆ. ಧೈರ್ಯವಿದ್ದರೆ ವಿಶಾಲ್ ತಾವು ಯಾವುದೇ ಹುಡುಗಿಯ ಸಹವಾಸ ಮಾಡಿಲ್ಲ ಎಂದು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.