ಪುತ್ರನ ಆಸೆ ನೆರವೇರಿಸಲು ಲಂಡನ್ ಗೆ ಹಾರಿದ ನಟ ಮಹೇಶ್ ಬಾಬು

ಸೋಮವಾರ, 10 ಜೂನ್ 2019 (09:46 IST)
ಲಂಡನ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಮಹರ್ಷಿ ರಿಲೀಸ್ ಗೆ ಮೊದಲು ಕುಟುಂಬ ಸಮೇತ ಮಹೇಶ್ ಬಾಬು ಲಂಡನ್ ಗೆ ರಜಾ ದಿನ ಕಳೆಯಲು ಹಾರಿದ್ದಾರೆ.


ಹೇಳಿ ಕೇಳಿ ಈಗ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಜ್ವರ ಜೋರಾಗಿದೆ. ಹೀಗಾಗಿ ಪುತ್ರ ಗೌತಮ್ ನ ಆಸೆ ನೆರವೇರಿಸಲು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಟೀಂ ಇಂಡಿಯಾ ಪಂದ್ಯ ವೀಕ್ಷಣೆಗೆ ಓವಲ್ ಮೈದಾನಕ್ಕೆ ಬಂದಿದ್ದಾರೆ.

ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿರುವ ಮಹೇಶ್ ಬಾಬು ಈ ಮೂಲಕ ತಾವು ಪುತ್ರನ ಆಸೆ ನೆರವೇರಿಸಿರುವುದಾಗಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ರಿಕೆಟ್ ಪ್ರೇಮಿ ಕಿಚ್ಚ ಸುದೀಪ್ ಈಗ ಲಂಡನ್ ನಲ್ಲಿ!