Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಪಂದ್ಯ ನೋಡಲು ಬಂದ ವಿಜಯ್ ಮಲ್ಯರನ್ನು ನೋಡಿ ‘ಕಳ್ಳ.. ಕಳ್ಳ’ ಎಂದ ಅಭಿಮಾನಿಗಳು

ವಿಶ್ವಕಪ್ 2019: ಪಂದ್ಯ ನೋಡಲು ಬಂದ ವಿಜಯ್ ಮಲ್ಯರನ್ನು ನೋಡಿ ‘ಕಳ್ಳ.. ಕಳ್ಳ’ ಎಂದ ಅಭಿಮಾನಿಗಳು
ಲಂಡನ್ , ಸೋಮವಾರ, 10 ಜೂನ್ 2019 (09:33 IST)
ಲಂಡನ್:  ಭಾರತೀಯ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಟೀಂ ಇಂಡಿಯಾ ವಿಶ್ವಕಪ್ ಪಂದ್ಯವಾಡುವುದನ್ನು ನೋಡಲು ಬಂದಿದ್ದಾರೆ.


ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಓವಲ್ ಮೈದಾನದಲ್ಲಿ ಅವರು ಹಾಜರಿರುವುದನ್ನು ನೋಡಿ ಭಾರತೀಯ ಪ್ರೇಕ್ಷಕರ ಕೆಲವು ಗುಂಪು ಅವರನ್ನು ಕಳ್ಳ ಕಳ್ಳ ಎಂದು ಕೂಗಿ ಮುಜುಗರವಾಗುವಂತೆ ಮಾಡಿದೆ.

ಮಾಧ್ಯಮಗಳಿಗೆ ಮಾತನಾಡಿರುವ ‘ನಾನು ಪಂದ್ಯ ನೋಡಲು ಬಂದಿದ್ದೇನೆ’ ಎಂದಷ್ಟೇ ವಿಜಯ್ ಮಲ್ಯ ಹೇಳಿದ್ದಾರೆ. ಲಂಡನ್ ನಲ್ಲಿ ಪಂದ್ಯ ನಡೆಯುವಾಗಲೆಲ್ಲಾ ವಿಜಯ್ ಮಲ್ಯ ಪಂದ್ಯ ವೀಕ್ಷಣೆಗೆ ಬರುತ್ತಾರೆ. ಹಿಂದೆಯೂ ಒಮ್ಮೆ ಭಾರತ ಪಂದ್ಯವಿದ್ದಾಗ ಮೈದಾನಕ್ಕೆ ಬಂದು ಸುದ್ದಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ಓವಲ್ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಕಂಡು ದಂಗಾದ ಕಾಮೆಂಟೇಟರ್ ಗಳು!