Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ 2 ರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್

ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ 2 ರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಮಂಗಳವಾರ, 30 ಜುಲೈ 2019 (09:10 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಸಿನಿಮಾ ಎಂದರೆ ಪಕ್ಕನೇ ನೆನಪಾಗುವುದು ಗೋಲ್ಡನ್ ಸ್ಟಾರ್ ಗಣೇಶ್. ಇದೀಗ ಭಟ್ಟರು ಗಾಳಿಪಟ 2 ಚಿತ್ರ ಮಾಡಲು ಹೊರಟಿದ್ದು, ಆ ಸಿನಿಮಾದಲ್ಲೂ ಗಣೇಶ್ ಅಭಿನಯಿಸುತ್ತಿದ್ದಾರಂತೆ.


ಗಾಳಿಪಟ 2 ರಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಯೋಗರಾಜ್ ಭಟ್ ಯೋಜನೆ ಹಾಕಿಕೊಂಡಿದ್ದರು. ಆದರೆ ಗಾಳಿಪಟ 2 ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಗಣೇಶ್ ಇರಲೇಬೇಕೆಂದು ಒತ್ತಾಯ ಮಾಡಿದ್ದರು.

ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿದ್ದಾರೆ. ಗಣೇಶ್ ಜತೆಗೆ ಗಾಳಿಪಟ ಮೊದಲ ಭಾಗದಲ್ಲಿ ಅಭಿನಯಿಸಿದ್ದ ದೂದ್ ಪೇಡಾ ದಿಗಂತ್ ಮತ್ತು ಅನಂತನಾಗ್ ಕೂಡಾ ಈ ಭಾಗದಲ್ಲಿ ಅಭಿನಯಿಸಲಿದ್ದಾರೆ. ಇದರೊಂದಿಗೆ ಮತ್ತೆ ಗಣೇಶ್-ಯೋಗರಾಜ್ ಭಟ್ ಕಾಂಬಿನೇಷನ್ ಜತೆಯಾಗಿ ಕೆಲಸ ಮಾಡಲಿದ್ದು, ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ನಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುವುದು ಕನ್ ಫರ್ಮ್