ಮುಂಬೈ: ನಗುಮೊಗದ ಚೆಲುವ ಮಾಧವನ್ ಎಂದರೆ ಎಷ್ಟೋ ಹುಡುಗಿಯರಿಗೆ ಫೇವರಿಟ್ ನಟ. ಆದರೆ ಮಾಧವನ್ ಈಗ ನಡುವಯಸ್ಸಾದರೂ ಅವರ ಮೇಲೆ ಹುಡುಗಿಯರ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
									
										
								
																	
ಮಾಧವನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸೆಲ್ಫೀ ಫೋಟೋವೊಂದನ್ನು ಪ್ರಕಟಿಸಿ ‘ವಯಸ್ಸಾಗುತ್ತಿದೆ’ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಮಾಧವನ್ ತಲೆಗೂದಲು ಕೊಂಚ ಬೆಳ್ಳಗಾಗಿದ್ದರೂ, ಅವರ ಕಣ್ಣುಗಳಲ್ಲಿ ಅದೇ ಚಾರ್ಮ್ ಇದೆ.
									
			
			 
 			
 
 			
			                     
							
							
			        							
								
																	ಇದನ್ನು ನೋಡಿ ಅಭಿಮಾನಿಗಳು ಹಾಟ್, ಸೆಕ್ಸೀ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಆದರೆ ಅದರಲ್ಲೂ ಯುವತಿಯೊಬ್ಬಳು ನೇರವಾಗಿ ಮಾಧವನ್ ಗೆ ಮದುವೆ ಪ್ರಪೋಸಲ್ ನೀಡಿದ್ದಾಳೆ! ‘ನನಗೀಗ 18 ವರ್ಷ. ನಾನು ನಿಮ್ಮನ್ನು ಮದುವೆಯಾಗಬೇಕು’ ಎಂದು ಗೋಗರೆದಿದ್ದಾಳೆ. ಇದಕ್ಕೆ ಮಾಧವನ್ ಕೂಡಾ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
									
										
								
																	‘ನಿನಗೆ ದೇವರು ಒಳ್ಳೆಯದು ಮಾಡಲಿ. ನಿನಗೆ ನನಗಿಂತ ಯೋಗ್ಯ ವ್ಯಕ್ತಿ ಸಿಗುತ್ತಾರೆ’ ಎಂದು ಮಾಧವನ್ ನಗುತ್ತಲೇ ಅಭಿಮಾನಿಯನ್ನು ಸಮಾಧಾನ ಮಾಡಿದ್ದಾರೆ.