ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಅವರು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಅಷ್ಟೇ ಅಲ್ಲ, ಅಭಿಮಾನಿಗಳು ಕೂಡ ಸೆಲ್ಫಿ ಸಲುವಾಗಿ ಮುತ್ತಿಕೊಳ್ಳುತ್ತಾರೆ. ಆದರೆ ಇಂಥ ಸಂದರ್ಭದಲ್ಲಿ ಕೂಡ ರಶ್ಮಿಕಾ ಕಿರಿಕಿರಿ ಮಾಡಿಕೊಂಡಿಲ್ಲ. ಎಲ್ಲವನ್ನೂ ಅವರು ನಗುಮುಖದಿಂದಲೇ ನಿಭಾಯಿಸಿದ್ದಾರೆ. ಫೋಟೋಗಾಗಿ ಜನರು ಮುಗಿಬಿದ್ದಾಗ ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಟ್ಟಾಗುವುದುಂಟು. ಕೆಲವು ನಟ-ನಟಿಯರು ತುಂಬ ದುರಹಂಕಾರದಿಂದ ನಡೆದುಕೊಂಡಿದ್ದೂ ಇದೆ. ಆದರೆ ರಶ್ಮಿಕಾ ಮಂದಣ್ಣ ಆ ರೀತಿ ಮಾಡಿಲ್ಲ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರನ್ನು ಕಂಡ ತಕ್ಷಣ ಕೆಲವು ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸಿ, ಸೆಲ್ಫಿಗೆ ಪೋಸ್ ನೀಡಿ ರಶ್ಮಿಕಾ ಮುಂದೆ ಸಾಗಿದರು. ಅಭಿಮಾನಿಗಳು ಮುತ್ತಿಕೊಂಡಾಗ ತಾಳ್ಮೆಯಿಂದ ನಡೆದುಕೊಂಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದ ಮಕ್ಕಳನ್ನು ಅವರು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಈ ಗುಣವನ್ನು ನೆಟ್ಟಿಗರು ಮೆಚ್ಚಿ ಹೊಗಳಿದ್ದಾರೆ