Publish Date: Mon, 07 Mar 2022 (09:10 IST)
Updated Date: Mon, 07 Mar 2022 (09:37 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾದಲ್ಲಿ ಮಿಂಚುತ್ತಿದ್ದರೂ ತಮ್ಮ ಮೂಲ ಕೊಡವ ಸಂಪ್ರದಾಯವನ್ನು ಮರೆತಿಲ್ಲ.
ಇದೀಗ ತೆಲುಗು ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ರಶ್ಮಿಕಾ ಪಕ್ಕಾ ಕೊಡವ ಸ್ಟೈಲ್ ನಲ್ಲಿ ಸೀರೆ ಉಟ್ಟುಕೊಂಡು ಬಂದ ಎಲ್ಲರ ಗಮನ ಸೆಳೆದಿದ್ದರು.
ಕೊಡವ ಸೀರೆ ಮೇಲಿನ ಪ್ರೀತಿಯಿಂದ ಈ ಉಡುಪಿನಲ್ಲಿ ಬಂದಿರುವುದಾಗಿ ರಶ್ಮಿಕಾ ಹೇಳಿಕೊಂಡಿದ್ದರು. ಅವರ ಈ ಫೋಟೋಗೆ ನೆಟ್ಟಿಗರು ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.