Publish Date: Thu, 03 Mar 2022 (16:55 IST)
Updated Date: Thu, 03 Mar 2022 (16:56 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಬಳಿಕ ರೆಬಲ್ ಸ್ಟಾರ್ ಪ್ರಭಾಸ್ ಮದುವೆಯಾಗಲು ಯೋಚಿಸಿದ್ದರಂತೆ. ಆದರೆ ಆ ಒಂದು ವಿಚಾರದಿಂದಾಗಿ ಮದುವೆ ಈಗ ಬೇಡ ಎಂದು ನಿರ್ಧರಿಸಿದರಂತೆ! ಹೀಗಂತ ರಾಧೇ ಶ್ಯಾಮ್ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಪ್ರಭಾಸ್ ಬಹಿರಂಗಪಡಿಸಿದ್ದಾರೆ.
ಎಲ್ಲರ ಮನೆಯಲ್ಲಿರುವಂತೆ ನನ್ನ ಮನೆಯಲ್ಲೂ ಅಮ್ಮ ಮದುವೆಯಾಗು ಎಂದು ಹೇಳುತ್ತಲೇ ಇರುತ್ತಾರೆ. ಆವತ್ತು ಬಾಹುಬಲಿ ಸಿನಿಮಾ ಒಂದು ಮುಗಿಯಲಿ. ಆಮೇಲೆ ಮದುವೆಯಾಗುತ್ತೇನೆ ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಆ ಸಂದರ್ಭದಲ್ಲಿ ಪ್ರೀತಿ ನಾನು ಊಹೆ ಮಾಡಿದ ರೀತಿಯಲ್ಲಿ ಇಲ್ಲ ಎಂಬುದು ಗೊತ್ತಾಯ್ತು. ಹೀಗಾಗಿ ಸದ್ಯಕ್ಕೆ ಮದುವೆ ಬೇಡ ಎಂದು ನಿರ್ಧರಿಸಿದೆ ಎಂದು ಪ್ರಭಾಸ್ ಹೇಳಿದ್ದಾರೆ.
ಈಗಲೂ ಅಮ್ಮನಿಗೆ ನಾನು ಸೆಟ್ಲ್ ಆಗಲಿ ಎಂದೇ ಆಸೆ. ಖಂಡಿತಾ ನಾನು ಮದುವೆಯಾಗುತ್ತೇನೆ. ಅದಕ್ಕೆ ತಕ್ಕ ಕಾಲ ಕೂಡಿ ಬರಬೇಕು ಎಂದಿದ್ದಾರೆ ಪ್ರಭಾಸ್.