Select Your Language

Notifications

webdunia
webdunia
webdunia
webdunia

ಜನಾರ್ಧನ್ ರೆಡ್ಡಿ ಮಗ ಹೀರೋ ,ಬಾಹುಬಲಿ ಡೈರೆಕ್ಟರ್ ಆಕ್ಷನ್ ಕಟ್

Corona
ಐದಾರು ತಿಂಗಳಿನಿಂದ ಒಂದು ಸುದ್ದಿ ಒಡಾಡುತ್ತಿದೆ. ಗಾಲಿ ಜನಾರ್ದನ್ ರೆಡ್ಡಿ ಅವರ ಮಗ ಸಿನಿಮಾ ರಂಗಕ್ಕೆ ಹೀರೋ ಆಗಿ ಬರಲಿದ್ದಾರೆ ಅಂತ. ಆದ್ರೆ ಯಾವಾಗ ಯಾವ ಸಿನಿಮಾ, ಯಾರ ಡೈರೆಕ್ಷನ್​​ನಲ್ಲಿ ಅನ್ನೋದೇ ಸರಿಯಾಗಿ ಮಾಹಿತಿ ಸಿಕ್ಕಿರಲಿಲ್ಲ. ರೆಡ್ಡಿ ಪುತ್ರರ ಸಿನಿಮಾಕ್ಕೆ ಟಾಲಿವುಡ್​​ನ ಚಿತ್ರಬ್ರಹ್ಮ ಎಸ್.ಎಸ್.ರಾಜಮೌಳಿ ಅವರ ಸೂಪರ್​ ಸಾಥ್ ಸಿಗುತ್ತಿದೆ.
ರಾಜಕೀಯ ರಂಗಕ್ಕೂ ಸಿನಿಮಾ ರಂಗಕ್ಕೂ ಹಿಂದಿನಿಂದಲೂ ನೆಂಟಸ್ತಿಕೆ ಇದೆ. ಆ ಸಂಪ್ರದಾಯದಂತೆ ಈಗ ಗಾಲಿ ಜನಾರ್ದನ್ ರೆಡ್ಡಿ ಅವರ ಸುಪುತ್ರ ಹೀರೋ ಆಗಲು ಸಜ್ಜಾಗುತ್ತಿದ್ದಾರೆ. ಕಿರೀಟಿ ಜನಾರ್ದನ್ ರೆಡ್ಡಿಯ ಹೊಸ ಚಿತ್ರಕ್ಕೆ ಟಾಲಿವುಡ್ ಜಕ್ಕಣ್ಣ ಸಾಥ್ ನೀಡ್ತಿದ್ದಾರೆ.
ರೆಡ್ಡಿ ಪುತ್ರ ಕಿರೀಟಿ ಹೊಸ ಚಿತ್ರಕ್ಕೆ ರಾಜಮೌಳಿ ಅನುಮೋದನೆ
ಕೆಲ ದಿನಗಳಿಂದ ಬಳ್ಳಾರಿಯಿಂದ ಗಾಂಧಿನಗರ ತನಕ ಗಾಂಧಿನಗರದಿಂದ ಟಾಲಿವುಡ್​ನ ಮಾಯ ಸಿನಿ ಬಜಾರ್ ತನಕ ಗಾಳಿ ಸುದ್ದಿಯಾಗಿ ಹಬ್ಬಿತ್ತು. ಈಗ ಆ ಗಾಳಿ ಸುದ್ದಿಗೆ ಜೀವ ಬಂದಿದೆ. ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರ ಸುಪುತ್ರ ಕಿರೀಟಿ ಹೀರೋ ಸಿನಿಮಾ ರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.
 
ಹೌದು, ಜನಾರ್ಧನ್ ರೆಡ್ಡಿ ಅವರ ಪುತ್ರ ಸಿನಿಮಾ ರಂಗಕ್ಕೆ ಬರೋದು ಪಕ್ಕಾ ಆಗಿದೆ. ಸಿನಿಮಾ ಬ್ಯಾನರು, ಡೈರೆಕ್ಟರು ಎಲ್ಲವೂ ಫೈನಲ್ ಆಗಿದೆ.. ಶಿವರಾತ್ರಿ ಹಬ್ಬದ ಪ್ರಯುಕ್ತ ರೆಡ್ಡಿ ಫ್ಯಾಮಿಲಿಯಿಂದ ಈ ಗುಟ್ಟದಾ ಸಿನಿಮಾ ವಿಚಾರ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

97% ರಷ್ಟು ಅಂಕ ತೆಗೆದರು ಮೆಡಿಕಲ್ ಸೀಟ್ ಸಿಗಲಿಲ್ಲ