Publish Date: Mon, 28 Feb 2022 (17:27 IST)
Updated Date: Mon, 28 Feb 2022 (20:05 IST)
ಲಕ್ನೋ : ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯೂ ಜೂನ್ 22ರ ಸುಮಾರಿಗೆ ಪ್ರಾರಂಭವಾಗಬಹುದು,
ಆಗಸ್ಟ್ ಮಧ್ಯದ ವೇಳೆ ಅಂತ್ಯವಾಗಬಹುದು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರದ ಸಂಶೋಧಕರು ನಡೆಸಿದ ಅಧ್ಯಯನ ಮಾದರಿಯಲ್ಲಿ ಸೂಚಿಸಲಾಗಿದೆ.
ಕೊರೊನಾ ನಾಲ್ಕನೇ ಅಲೆಯೂ ಸರಿಸುಮಾರು ನಾಲ್ಕು ತಿಂಗಳುಗಳವರೆಗೆ ಇರುತ್ತದೆ ಮತ್ತು ಮೊದಲ ಮತ್ತು ಎರಡನೇ ವ್ಯಾಕ್ಸಿನ್ ಡೋಸ್ಗಳನ್ನು ಸ್ವೀಕರಿಸಿದ್ದರು ಸಹ ಕೊರೊನಾ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಐಐಟಿ ಕಾನ್ಪುರದ ಹಿರಿಯ ಸಂಶೋಧಕರು ಹೇಳಿದ್ದಾರೆ.