Select Your Language

Notifications

webdunia
webdunia
webdunia
webdunia

ಉಕ್ರೇನ್ ನಮ್ಮ ವಿದ್ಯಾರ್ಥಿಗಳು ಊಟ ನೀರಿಲ್ಲದೆ ಪರದಾಟ

ಉಕ್ರೇನ್ ನಮ್ಮ ವಿದ್ಯಾರ್ಥಿಗಳು ಊಟ ನೀರಿಲ್ಲದೆ ಪರದಾಟ
, ಸೋಮವಾರ, 28 ಫೆಬ್ರವರಿ 2022 (14:31 IST)
ಉಕ್ರೇನ್​​ನಲ್ಲಿರುವ ಭಾರತೀಯರಿಗೆ ವಿಶೇಷ ರೈಲುಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಭಾರತದ ರಾಯಭಾರ ಕಚೇರಿಯಿಂದ ಭಾರತೀಯರಿಗೆ ಸಲಹೆ ನೀಡಲಾಗಿದೆ. ಕೀವ್‌ನಲ್ಲಿ ವೀಕೆಂಡ್​ ಕರ್ಫ್ಯೂ ವಾಪಸ್​ ಪಡೆಯಲಾಗಿದೆ.
ಮುಂಜಾನೆಯಿಂದ ಬಾಂಬ್ ಹಾಗೂ ಗುಂಡಿನ ದಾಳಿ ಹೆಚ್ಚಾಗಿದೆ. ಬಂಕರ್​ಗಳಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಉಕ್ರೇನ್​ನ ಖಾರ್ಕೀವ್ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಖಾರ್ಕೀವ್​ನ ಮೆಟ್ರೋ ಅಂಡರ್ ಪಾಸ್ ಹಾಗೂ ಬಂಕರ್​ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಬಿಸ್ಕೇಟ್ ಹಾಗೂ ಬ್ರೆಡ್ ತಿಂದು ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ. ಕೊಡಗಿನ ಮತ್ತೋರ್ವ ವಿದ್ಯಾರ್ಥಿ ಉಕ್ರೇನ್​ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ನಿವಾಸಿ ಚಂದನ್ ಅಪಾಯದಲ್ಲಿದ್ದು, ಕಳೆದ ಒಂದು ವಾರದಿಂದ ಕಾರ್ಕಿವ್ ಪ್ರಾಂತ್ಯದ ಕತ್ತಲ ಬಂಕರ್​ನಲ್ಲಿರುವ ಕರ್ನಾಟಕದ ಒಂಭತ್ತು ಮಂದಿಯಿದ್ದಾರೆ. ಅಸಹ್ಯ ವಾತಾವರಣದಲ್ಲಿ ಒಂಭತ್ತು ವಿದ್ಯಾರ್ಥಿಗಳಿದ್ದು, ದಿನಕ್ಕೆರಡು ಬಿಸ್ಕೆಟ್ ಮಾತ್ರ ತಿಂದು ಬದುಕುತ್ತಿದ್ದಾರೆ. ತಮ್ಮ ದಯನೀಯ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿದ್ದಾರೆ. ನಾವು ಜೀವಂತವಾಗಿ ಬರುತ್ತೀವೋ ಇಲ್ವೋ ಆನ್ನೋ ಆತಂಕವಿದ್ದು, ನಮ್ಮ‌ ಜೀವ ಉಳಿಸಿ ಅಂತ ಕನ್ನಡಿಗ ವಿದ್ಯಾರ್ಥಿಗಳು ಮೊರೆ ಇಡುತ್ತಿದ್ದಾರೆ.
 
ಸದ್ಯ 5ನೇ ಬ್ಯಾಚ್​ನಲ್ಲಿ ಉಕ್ರೇನ್​ನಿಂದ ವಿದ್ಯಾರ್ಥಿಗಳು ವಾಪಸಾಗಿದ್ದಾರೆ. ಏರ್ ಏಷ್ಯಾ ವಿಮಾನದ ಮೂಲಕ ಸಂಜೆ 6.45ಕ್ಕೆ 5 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಶ್ರವಣ ಸ‌ಂಗಣ್ಣ ಬಿರಾದಾರ್, ಶಕ್ತಿ ಶ್ರೀ ಶೇಖರ್, ಮೈನಾ ನೈಲ್ ನಾಯ್ಕ್, ನಿಹಾರಿಕಾ ಮತ್ತು ಆಶಾ ವೆಂಕಟೇಶ್ ರೆಡ್ಡಿ
ಭಾರತಿ ಲಕ್ಷ್ಮೀಪುರ ಶ್ರೀನಿವಾಸ ಇಂಡಿಗೋ ವಿಮಾನದ ಮೂಲಕ ಮಧ್ಯಾಹ್ನ 2.55ಕ್ಕೆ ಹೈದರಾಬಾದ್​ಗೆ ಆಗಮಿಸಿದರು. ಉಳಿದ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ ಬಗ್ಗೆ ಕ್ರಮ ವಹಿಸಲು ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದೇವೆ ಎಂದು ನೋಡಲ್ ಅಧಿಕಾರಿಗೆ ಸಿಎಂ ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್ ಅಧ್ಯಕ್ಷನ ಹತ್ಯೆಗೆ ಸೈನಿಕರ ಸಿದ್ಧತೆ !