Publish Date: Mon, 28 Feb 2022 (14:42 IST)
Updated Date: Mon, 28 Feb 2022 (18:37 IST)
ದೇಶದ ಅತ್ಯುತ್ತಮ ಗೇಟೆಡ್ ಕಮ್ಯುನಿಟಿ ವ್ಯವಸ್ಥೆ ಹೊಂದಿರುವ ನಗರಗಳ ಪೈಕಿ ಬೆಂಗಳೂರು ನಗರ ಅಗ್ರಸ್ಥಾನ ಪಡೆದಿದೆ. ದೇಶದಲ್ಲೇ ಉತ್ತಮ ಸೌಕರ್ಯ, ಸುರಕ್ಷತೆಯನ್ನು ಬೆಂಗಳೂರಿನ ಗೇಟೆಡ್ ಕಮ್ಯುನಿಟಿಗಳು ಒದಗಿಸುತ್ತಿವೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಬ್ಯಾಚೆಲರ್ ಫ್ರೆಂಡ್ಲಿ, ಶುಚಿತ್ವ, ಮಕ್ಕಳ ಸುರಕ್ಷತೆ, ಕೌಟುಂಬಿಕ ವಾತಾವರಣ, ಸವಲತ್ತುಗಳು ಹೀಗೆ ಹತ್ತು ಹಲವು ಮಾನದಂಡಗಳಲ್ಲಿ ಬೆಂಗಳೂರಿನ ಗೇಟೆಡ್ ಕಮ್ಯುನಿಟಿ ಮೊದಲಿಗನಾಗಿ ಹೊಮ್ಮಿದೆ. ಗೇಟೆಡ್ ಕಮ್ಯುನಿಟಿ ಅಂದರೆ ರೆಸಿಡೆನ್ಷಿಯಲ್ ಕಾಂಪ್ಲೆಕ್ಸುಗಳನ್ನು, ಅಪಾರ್ಟ್ ಮೆಂಟುಗಳನ್ನು ಹೊಂದಿರುವ ಸಂರಕ್ಷಿತ ಪ್ರದೇಶ. ಹೆಚ್ಚಿನ ಮಂದಿ ಸುರಕ್ಷತೆಯ ದೃಷ್ಟಿಯಿಂದ ಗೇಟೆಡ್ ಕಮ್ಯುನಿಟಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.