Publish Date: Wed, 02 Mar 2022 (08:40 IST)
Updated Date: Wed, 02 Mar 2022 (09:00 IST)
ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಈ ವರ್ಷಾಂತ್ಯಕ್ಕೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಜಯ್ ಈ ಮೊದಲೇ ಪ್ರತಿಕ್ರಿಯಿಸಿ ಇದು ಶುದ್ಧ ಸುಳ್ಳು ಸುದ್ದಿ ಎಂದಿದ್ದರು.
ಇದೀಗ ರಶ್ಮಿಕಾ ಕೂಡಾ ಇದೆಲ್ಲಾ ಟೈಂ ಪಾಸ್ ರೂಮರ್ ಗಳು. ಇದರ ಬಗ್ಗೆ ನಾನೇನೂ ಹೇಳಲ್ಲ. ಕೆಲವರಿಗೆ ನನ್ನ ಬಗ್ಗೆ ಗಾಸಿಪ್ ಹರಡುವುದೇ ಖುಷಿ ಆದರೆ ಅವರು ಹಾಗೇ ಇರಲಿ, ನಾನು ಹೀಗೆಯೇ ಇರುತ್ತೇನೆ ಎಂದು ರಶ್ಮಿಕಾ ಟಾಂಗ್ ಕೊಟ್ಟಿದ್ದಾರೆ.