ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಈಗ ಎಲ್ಲೇ ಹೋದರೂ, ಏನೇ ಮಾಡಿದರೂ ಸೆನ್ಸೇಷನ್ ಆಗುತ್ತದೆ. ಇದೀಗ ರಶ್ಮಿಕಾ ಏರ್ ಪೋರ್ಟ್ ನಲ್ಲಿ ಫೋಟೋಗ್ರಾಫರ್ ಗಳ ಜೊತೆ ನಡೆದುಕೊಂಡ ರೀತಿಗೆ ಟ್ರೋಲ್ ಆಗಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಫೋಟೋ ತೆಗೆಯಲು ಸುತ್ತುವರಿದ ಫೋಟೋಗ್ರಾಫರ್ ಗಳಿಗೆ ರಶ್ಮಿಕಾ ನಗುತ್ತಾ ಮಾತನಾಡಿಸಿದ್ದಲ್ಲದೆ, ಸೆಲ್ಫೀಗೂ ಪೋಸ್ ಕೊಟ್ಟಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಕೆಲವು ನೆಟ್ಟಿಗರು ರಶ್ಮಿಕಾ ಸುಂದರಿ, ಉತ್ತಮ ನಟಿ ಎನ್ನೋದೇನೋ ನಿಜ. ಆದರೆ ಕೆಲವೊಮ್ಮೆ ಓವರ್ ಆಕ್ಟಿಂಗ್ ಮಾಡ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.