Publish Date: Tue, 22 Feb 2022 (11:03 IST)
Updated Date: Tue, 22 Feb 2022 (11:05 IST)
ಹೈದರಾಬಾದ್: ನಟಿ ಸಮಂತಾ ಋತು ಪ್ರಭು ವೈವಾಹಿಕ ಜೀವನ ಮುರಿದುಬಿದ್ದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅವರ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದೂ ಇದೆ. ಈ ರೀತಿ ಕೀಳಾಗಿ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಸಮಂತಾ ಈಗ ತಕ್ಕ ತಿರುಗೇಟು ನೀಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಸಮಂತಾ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ನೆಟ್ಟಿಗನೊಬ್ಬ ನೀವು ಸಂತಾನೋತ್ಪತ್ತಿ ಮಾಡಿದ್ದೀರಾ? ನಾನು ನಿಮ್ಮನ್ನು ರಿಪ್ರೊಡ್ಯೂಸ್ ಮಾಡಬೇಕೆಂದಿದ್ದೇನೆ ಎಂದು ಕೀಳಾಗಿ ಪ್ರಶ್ನಿಸಿದ್ದಾನೆ.
ಇದಕ್ಕೆ ತಕ್ಕ ಉತ್ತರ ನೀಡಿರುವ ಸಮಂತಾ ರಿಪ್ರೊಡ್ಯೂಸ್ ಎಂಬ ಪದವನ್ನು ಒಂದು ವಾಕ್ಯದಲ್ಲಿ ಹೇಗೆ ಬಳಸಬೇಕು? ನಾವು ಮೊದಲು ಅದನ್ನು ಗೂಗಲ್ ಮಾಡಬೇಕಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.