Publish Date: Mon, 21 Feb 2022 (11:15 IST)
Updated Date: Mon, 21 Feb 2022 (15:18 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟರು ಅನೇಕರು ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಕಿಚ್ಚ ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ ಮುಂತಾದವರ ಹೆಸರು ಸೇರ್ಪಡೆಯಾಗುತ್ತದೆ.
ಈ ವರ್ಷ ಕೆಲವು ಖ್ಯಾತ ನಟರು ಅಭಿನಯದ ಜೊತೆಗೆ ನಿರ್ದೇಶನದ ಜವಾಬ್ಧಾರಿಯನ್ನೂ ಹೊತ್ತುಕೊಳ್ಳಲಿದ್ದಾರೆ. ಈ ಪೈಕಿ ರಿಯಲ್ ಸ್ಟಾರ್ ಉಪೇಂದ್ರ ಈಗಾಗಲೇ ತಮ್ಮ ನಿರ್ದೇಶನದ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಕೂಡಾ ಸಲಗ ಯಶಸ್ಸಿನ ಖುಷಿಯಲ್ಲಿ ಎರಡನೇ ಸಿನಿಮಾ ನಿರ್ದೇಶನದ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಭಾಗ ಎರಡರ ಮೂಲಕ ಮತ್ತೆ ನಿರ್ದೇಶಕರ ಕ್ಯಾಪ್ ತೊಡಲಿದ್ದಾರೆ. ಈ ಸಿನಿಮಾ ಈ ವರ್ಷ ಆರಂಭವಾಗುವ ಸಾಧ್ಯತೆಯಿದೆ. ಕಿಚ್ಚ ಸುದೀಪ್ ಈ ವರ್ಷ ತಮ್ಮ ನಿರ್ದೇಶನದ ಸಿನಿಮಾ ಮಾಡುವುದು ಗ್ಯಾರಂಟಿ ಎಂದಿದ್ದಾರೆ. ಇವರ ಜೊತೆಗೆ ಇದುವರೆಗೆ ಪೋಷಕ ನಟ, ನಾಯಕ ನಟನಾಗಿ ಮಿಂಚಿದ್ದ ನಟ ನೀನಾಸಂ ಸತೀಶ್ ಈ ವರ್ಷ ತಮ್ಮದೇ ಡೈರೆಕ್ಷನ್ ನ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಮತ್ತೆ ಕೊರೋನಾ ಕಾಟ ಇಲ್ಲದೇ ಹೋದರೆ ಮತ್ತಷ್ಟು ಒಳ್ಳೊಳ್ಳೆ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಬರಬಹುದು.