Select Your Language

Notifications

webdunia
webdunia
webdunia
Wednesday, 9 April 2025
webdunia

ಪುನೀತ್ ಕಳೆದುಕೊಂಡ ದುಃಖದಲ್ಲಿದ್ದ ಅಶ್ವಿನಿ ಪುನೀತ್ ಗೆ ಈಗ ಪಿತೃವಿಯೋಗದ ಆಘಾತ

ಅಶ್ವಿನಿ ಪುನೀತ್ ರಾಜ್ ಕುಮಾರ್
ಬೆಂಗಳೂರು , ಭಾನುವಾರ, 20 ಫೆಬ್ರವರಿ 2022 (16:58 IST)
;ಬೆಂಗಳೂರು: ಇತ್ತೀಚೆಗಷ್ಟೇ ಗಂಡ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ದುಃಖದಲ್ಲಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಈಗ ಪಿತೃವಿಯೋಗದ ಆಘಾತದ ಎದುರಾಗಿದೆ.

ಅಶ್ವಿನಿ ತಂದೆ 78 ವರ್ಷದ ರೇವನಾಥ್ ಇಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಪುನೀತ್ ಕುಟುಂಬದಲ್ಲಿ ಮತ್ತೆ ಸೂತಕದ ಛಾಯೆ ಆವರಿಸಿದೆ.

ಅಳಿಯ ಪುನೀತ್ ಸಾವಿನ ಬಳಿಕ ರೇವನಾಥ್ ತೀವ್ರ ನೊಂದಿದ್ದರು. ಇದೀಗ ಅಳಿಯ ಅಗಲಿದ ಕೆಲವೇ ತಿಂಗಳ ಅಂತರದಲ್ಲಿ ಮಾವನೂ ಬಾರದ ಲೋಕಕ್ಕೆ ತೆರಳಿದ್ದು ವಿಪರ್ಯಾಸ. ವಿಶೇಷವೆಂದರೆ ಪುನೀತ್ ರಿಂದ ಸ್ಪೂರ್ತಿ ಪಡೆದಿದ್ದ ರೇವನಾಥ್ ಕುಟುಂಬ ತಾವೂ ನೇತ್ರದಾನಕ್ಕೆ ಸಂಕಲ್ಪ ಮಾಡಿದ್ದರು. ಅದರಂತೆ ಈಗ ರೇವನಾಥ್ ಕಣ್ಣುಗಳನ್ನು ದಾನ ಮಾಡಲಾಗಿದೆ. ಅವರ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಅಂತ್ಯ ಕ್ರಿಯೆ ನೆರವೇರುವ ಸಾಧ್ಯತೆಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಲ್ಲಿ ಬಣ್ಣ ಹಚ್ಚಿದ ಬಿಎಸ್ ಯಡಿಯೂರಪ್ಪ!