Select Your Language

Notifications

webdunia
webdunia
webdunia
webdunia

ಏಕ್ ಲವ್ ಯಾ ಸಿನಿಮಾ ವೀಕ್ಷಿಲು ಸಿಎಂಗೆ ಆಹ್ವಾನವಿತ್ತ ಪ್ರೇಮ್

ಏಕ್ ಲವ್ ಯಾ ಸಿನಿಮಾ ವೀಕ್ಷಿಲು ಸಿಎಂಗೆ ಆಹ್ವಾನವಿತ್ತ ಪ್ರೇಮ್
ಬೆಂಗಳೂರು , ಭಾನುವಾರ, 20 ಫೆಬ್ರವರಿ 2022 (09:20 IST)
ಬೆಂಗಳೂರು: ಇದೇ ಫೆಬ್ರವರಿ 24 ರಂದು ಬಿಡುಗಡೆಯಾಗಲಿರುವ ಏಕ್ ಲವ್ ಯಾ ಸಿನಿಮಾ ವೀಕ್ಷಿಸಲು ನಿರ್ದೇಶಕ ಪ್ರೇಮ್ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನವಿತ್ತಿದ್ದಾರೆ.

ಪ್ರೇಮ್ ನಿರ್ದೇಶನದ, ರಕ್ಷಿತ್ ಪ್ರೇಮ್ ನಿರ್ಮಾಣದ ರಾಣಾ ನಾಯಕರಾಗಿರುವ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಂ ಕೂಡಾ ವಿಶೇಷ ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.

ಈ ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸುವಂತೆ ಖುದ್ದಾಗಿ ಪ್ರೇಮ್ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನವಿತ್ತಿದ್ದಾರೆ. ಹೀಗಾಗಿ ಪ್ರೀಮಿಯರ್ ಶೋಗೆ ಸಿಎಂ ಅತಿಥಿಯಾಗಿ ಬರುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಹುಟ್ಟುಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ