Select Your Language

Notifications

webdunia
webdunia
webdunia
webdunia

ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ಕಠಿಣ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ಕಠಿಣ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
bangalore , ಭಾನುವಾರ, 13 ಫೆಬ್ರವರಿ 2022 (21:46 IST)
ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಅವರು ತಿಳಿಸಿದರು.
ನಾಳೆಯಿಂಧ ಪ್ರೌಢಶಾಲೆಗಳನ್ನು ಶುರುವಾಗಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಗಳ ಜೊತೆಗೆ ಶಾಂತಿ ಸಭೆ ಮಾಡುವಂತೆ ಸೂಚನೆ ನೀಡಲಾಗಿದೆ ಅಂತ ತಿಳಿಸಿದರು, ಇದೇ ವೇಳೆ ಅವರು ನಾಳೆಯಿಂದ ಶಾಲೆಗಳು ಶಾಂತಿಯುತವಾಗಿ ನಡೆಯುತ್ತದೆ ಅಂತ ತಿಳಿಸಿದರು.
ಇನ್ನೂ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ನಿಗಾವಹಿಸಲಾಗುವುದು, ಇದಕ್ಕೆ ಸಂಬಂಧಪಟ್ಟಂತೆ ಪ್ರಚೋದನೆ ನೀಡುವವರ ವಿರುದ್ದ ಅಧಿಕಾರಿಗಳನ್ನು ಗಮನಿಸಿದ್ದು, ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಅಂತ ತಿಳಿಸಿದರು. ಇನ್ನೂ ಕಾಲೇಜುಗಳ ಪುನರ್‌ ಆರಂಭದ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ, ಶಾಲಾ ಕಾಲೇಜುಗಳ ಆರಂಭ ಮಾಡುವುದೇ ನಮ್ಮ ಆದ್ಯತೆ ನೀಡುವುದಾಗಿದೆ ಅಂತ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?