Select Your Language

Notifications

webdunia
webdunia
webdunia
webdunia

ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?

ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?
bangalore , ಭಾನುವಾರ, 13 ಫೆಬ್ರವರಿ 2022 (21:36 IST)
ಬೆಂಗಳೂರು ನಡುವಿನ ಸಂಚಾರದ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಕೇಂದ್ರ ರೈಲ್ವೇ ಸಚಿವರಿಗೆ  ಮನವಿ ಮಾಡಿದ್ದೇನೆಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿದರು. 
ಮೈಸೂರಿನಲ್ಲಿ ಸುದ್ದಿಗಾರರ ಜೊತೆ  ಮಾತನಾಡಿದ ಅವರು, ಮೈಸೂರಿಗೆ ಒಡೆಯರ್ ಕೊಡುಗೆಯನ್ನು ಅರಿತು ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ವಿಚಾರವಾಗಿ ಸಾಕಷ್ಟು ಜನ ಮನವಿ ಮಾಡಿದ್ದರು. ಒಡೆಯರ್ ಕೊಡುಗೆ ಅಪಾರವಾಗಿದೆ. ಮೈಸೂರಿಗೆ ರೈಲು ತಂದಿದ್ದು ಮೈಸೂರು ಮಹಾರಾಜರು ಅವರ ಹೆಸರಿನಲ್ಲಿ ಒಂದು ರೈಲು ಇಲ್ಲ. ಆ ವಂಶವನ್ನು ನಾಶ ಮಾಡಲು ಹೋದವನ ಹೆಸರು ರೈಲಿಗೆ ಯಾಕೆ?.
 ಟಿಪ್ಪು ಸುಲ್ತಾನ್ ಒಂದು ರೈಲು ಹಳಿ ಹಾಕಿಲ್ಲ. ಅಂತಹ ಟಿಪ್ಪು ಹೆಸರು ಯಾಕೆ ಬೇಕು. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ ಎಂದು ಸವಾಲು ಹಾಕಿದರು.
ಟಿಪ್ಪು ಸುಲ್ತಾನ್ ಹೆಸರು ಇರಬಾರದು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದಿದ್ದಾರೆ.
ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ಎಲೆಕ್ಟ್ರಿಕ್ ರೈಲುಗಳ ಸಂಚಾರ ವ್ಯವಸ್ಥೆ ದೇಶದಲ್ಲಿ ಸಂಚಲನ ಹುಟ್ಟಿಸಲಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್‍ಗಳು ಸಂಚಾರ ಆರಂಭಿಸಲಿವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಣ ಹಂತದಲ್ಲಿನ ಕಟ್ಟಡದಿಂದ ಆಯತಪ್ಪಿ ಬಿದ್ದ ಕೂಲಿ ಕಾರ್ಮಿಕ ಸಾವು