Select Your Language

Notifications

webdunia
webdunia
webdunia
webdunia

ಕೊಡಗಿನ ಹೆದ್ದಾರಿ ಅಭಿವೃದ್ಧಿಗೆ ಸಿ.ಎಂ.ಗೆ ಪ್ರತಾಪ್ ಸಿಂಹ ಮನವಿ

ಕೊಡಗಿನ ಹೆದ್ದಾರಿ ಅಭಿವೃದ್ಧಿಗೆ ಸಿ.ಎಂ.ಗೆ ಪ್ರತಾಪ್ ಸಿಂಹ ಮನವಿ
bangalore , ಮಂಗಳವಾರ, 8 ಫೆಬ್ರವರಿ 2022 (19:32 IST)
ಮೈಸೂರು-ಕೊಡಗು ಕ್ಷೇತ್ರದಲ್ಲಿನ ರಸ್ತೆಗಳನ್ನು ಕೆಆರ್‍ಡಿಸಿಎಲ್ ವತಿಯಿಂದ  ಸಾರ್ವಜನಿಕ ಸಂಸ್ಥೆಗಳ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಅಂಗೀಕಾರ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಪ್ರತಾಪ್ ಸಿಂಹ ಯೋಜನಾ ವರದಿ ಮೂಲಕ ಮನವಿ ಮಾಡಿದ್ದಾರೆ.      
ಈ ರಸ್ತೆಗಳ ಅಭಿವೃದ್ಧ್ದಿಗಾಗಿ ರಾಜ್ಯ ಬಜೆಟ್‍ನಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಬಳಿ ಸಂಸದ ಪ್ರತಾಪ್ ಸಿಂಹ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 
ಹುಣಸೂರು ತಾಲ್ಲೂಕು ಯಶೋಧರ ಮರ ಹತ್ತಿರ ರಾಷ್ಟ್ರೀಯ ಹೆದ್ದಾರಿ-275ರ ಜಂಕ್ಷನ್ (ಕಲ್ಲುಬೆಟ್ಟ) ನಿಂದ ರಾಜ್ಯ  ಹೆದ್ದಾರಿ-90 (ಹುಣಸೂರು-ವೀರಾಜಪೇಟೆ-ತಲಕಾವೇರಿ ರಸ್ತೆ) ತಿತಿಮತಿ-ಗೋಣಿಕೊಪ್ಪ-ಬಿಟ್ಟಂಗಾಲ-ಪೆರಂಬಾಡಿ(ರಾಜ್ಯ ಹೆದ್ದಾರಿ) 
ಕಂಡಿಮಕ್ಕಿ-ಮಾಕುಟ್ಟ ಮಾರ್ಗವಾಗಿ ಕರ್ನಾಟಕ-ಕೇರಳ ಗಡಿ ವರೆಗೆ ರಸ್ತೆ ಅಭಿವೃದ್ಧಿ-ಒಟ್ಟು 76 ಕಿ.ಮೀ. ಉದ್ದ. ರಾಜ್ಯ  ಹೆದ್ದಾರಿ-89 (ಮಡಿಕೇರಿ-ಕುಟ್ಟ ರಸ್ತೆ) ಮಡಿಕೇರಿ-ಸಿದ್ದಾಪುರ-ಪಾಲಿಬೆಟ್ಟ-ಗೋಣಿಕೊಪ್ಪ-ಪೊನ್ನಂಪೇಟೆ-ಹುದಿಕೇರಿ-ಶ್ರೀಮಂಗಲ ಮಾರ್ಗವಾಗಿ ಕುಟ್ಟ ಸೇರುವ ರಸ್ತೆ ಅಭಿವೃದ್ಧಿ- ಒಟ್ಟು 85.00 ಕಿಮೀ ಉದ್ದ.
ಈ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ