Select Your Language

Notifications

webdunia
webdunia
webdunia
webdunia

ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
bangalore , ಮಂಗಳವಾರ, 8 ಫೆಬ್ರವರಿ 2022 (19:28 IST)
ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2021-22 ನೇ ಸಾಲಿನ ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್ ಕೋರ್ಸಗಾಗಿ ಬಿ.ಇ., ಮೆಕ್ಯಾನಿಕಲ್, ಇಂಡಸ್ಟ್ರೀಯಲ್ ಪ್ರೋಡಕ್ಷನ್, ಆಟೋ ಮೊಬೈಲ್, ಆಟೋಮೇಷನ್ ಮತ್ತು ರೋಬೋಟಿಕ್ಸ್ /ಮೇರಿನ್ ಎಂಜಿನೀಯರಿಂಗ್ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಎಂಜಿನೀಯರಿಂಗ್ ಪ್ರವೇಶಕ್ಕೆ  ಅರ್ಜಿ ಆಹ್ವಾನಿಸಲಾಗಿದೆ.
        ಈ ಸಂಸ್ಥೆಯಲ್ಲಿ ಕೈಗಾರಿಕಾ ಘಟಕವಿರುವುದರಿಂದ ವಿದ್ಯಾರ್ಥಿಗಳಿಗೆ ಸಿಎನ್‍ಸಿ ಯಂತ್ರದಲ್ಲಿ, ರೊಬೋಟಿಕ್ಸ್ ಹಾಗೂ 3ಡಿ ಪ್ರಿಂಟಿಂಗ್‍ನಲ್ಲಿ ಕೆಲಸ ಮಾಡಬಹುದಾಗಿದ್ದು, ಇದಕ್ಕೆ ಬೇಕಾದಂತಹ ನೂತನ ತಂತ್ರಜ್ಞಾನ ಹಾಗೂ ಉಂತ್ರೋಪಕರಣಗಳು ಲಭ್ಯವಿದೆ. ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು  ಮತ್ತು ಇಲ್ಲಿಯವರೆಗೆ ಎಲ್ಲಾ ಪಾಸಾದಂತಹ ವಿದ್ಯಾರ್ಥಿಗಳಿಗೆ ಉದ್ಯೋಗವು ಲಭಿಸಿದೆ.
       ಹೆಚ್ಚಿನ ಮಾಹಿತಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು–16. ಮೊಬೈಲ್ ನಂ:9243989954/ 9141630303/7892498523 ನ್ನು ಸಂಪರ್ಕಿಸಬಹುದು  ಎಂದು ಮೈಸೂರು ಜಿ.ಟಿ.ಟಿ.ಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಸರಿ ಶಾಲು, ಹಿಜಾಬ್ ಗೆ ಅವಕಾಶ ಇಲ್ಲ : ಪಾಠ ಬೇಕಾದ್ರೆ ಸಮವಸ್ತ್ರ ಧರಿಸಿ- ಬಿ.ಸಿ ನಾಗೇಶ್