Publish Date: Sun, 20 Feb 2022 (17:07 IST)
Updated Date: Sun, 20 Feb 2022 (17:09 IST)
ಬೆಂಗಳೂರು: ಬೈ ಟು ಲೈವ್ ಸಿನಿಮಾ ಪ್ರಚಾರ ವೇಳೆ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಬೈ ಟು ಲವ್ ಸಿನಿಮಾ ಪ್ರಚಾರಕ್ಕಾಗಿ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಧನ್ವೀರ್ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹಲ್ಲೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದೆಲ್ಲಾ ನನ್ನ ಮೇಲಿನ ಕುತಂತತ್ರವಷ್ಟೇ. ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂದಿದ್ದಾರೆ. ಫೆಬ್ರವರಿ 17 ರಂದು ಅನುಪಮಾ ಥಿಯೇಟರ್ ಬಳಿ ಚಂದ್ರಶೇಖರ್ ಎಂಬ ಅಭಿಮಾನಿ ಸೆಲ್ಫೀ ಕೇಳಲು ಬಂದಾಗ ಧನ್ವೀರ್ ಪ್ರತಿಕ್ರಿಯಿಸಲಿಲ್ಲ. ಆಗ ಚಂದ್ರಶೇಖರ್ ಅಸಮಾಧಾನ ವ್ಯಕ್ತಿಪಡಿಸಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಚಂದ್ರಶೇಖರ್ ಮೇಲೆ ಧನ್ವೀರ್ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಎಫ್ ಐಆರ್ ಕೂಡಾ ದಾಖಲಾಗಿದೆ.