Publish Date: Sun, 06 Mar 2022 (09:40 IST)
Updated Date: Sun, 06 Mar 2022 (09:45 IST)
ಹೈದರಾಬಾದ್: ರಾಧೆ ಶ್ಯಾಮ್ ಸಿನಿಮಾ ಜೋಡಿ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ನಡುವೆ ವೈಮನಸ್ಯವಿದೆ ಎಂಬ ಸುದ್ದಿ ಕಳೆದ ಕೆಲವು ಸಮಯದಿಂದ ಹರಿದಾಡುತ್ತಿದೆ. ಇದಕ್ಕೆ ಕಾರಣ ಬಯಲಾಗಿದೆ.
ಈ ಹಿಂದೆ ಇಬ್ಬರು ಪ್ರಮುಖ ಪಾತ್ರಧಾರಿಗಳ ನಡುವೆ ವೈಮನಸ್ಯಗಳಿವೆ ಎಂದು ಸುದ್ದಿಯಾದಾಗ ಸ್ವತಃ ಚಿತ್ರತಂಡ ಇದೆಲ್ಲಾ ಗಾಳಿ ಸುದ್ದಿ ಎಂದು ತೇಪೆ ಹಾಕಲು ಯತ್ನಿಸಿತ್ತು.
ಆದರೆ ಈಗ ಮತ್ತೆ ಅದೇ ಸುದ್ದಿ ಹರಿದಾಡುತ್ತಿದೆ. ಪೂಜಾ ಸೆಟ್ ನಲ್ಲಿ ಸಮಯ ಪೋಲು ಮಾಡುವುದು ಪ್ರಭಾಸ್ ಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣಕ್ಕೆ ಇಬ್ಬರ ನಡುವೆ ಅಸಮಾಧಾನವಿತ್ತು ಎನ್ನಲಾಗಿದೆ.